ಪ್ರಮುಖ ಸುದ್ದಿ

ಮಡಿಕೇರಿಯ ಬಾಲಭವನದಲ್ಲಿ ಉಚಿತ ಕಾಲು ಜೋಡಣಾ ಶಿಬಿರ

ರಾಜ್ಯ(ಮಡಿಕೇರಿ) ನ.18 :- ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ಸ್, ರೋಟರಿ ಮಿಸ್ಟಿ ಹಿಲ್ಸ್, ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಹಾಗೂ ಚೆನ್ನೈನ ಫ್ರೀಡಂ ಟ್ರಸ್ಟ್ ವತಿಯಿಂದ ಮಡಿಕೇರಿಯ ಬಾಲಭವನದಲ್ಲಿ ಉಚಿತ ಕಾಲು ಜೋಡಣಾ ಶಿಬಿರ ನಡೆಯಿತು.

ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಎಂ.ಆರ್.ಜಗದೀಶ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ಸಮಾಜಮುಖಿ ಕಾರ್ಯಗಳ ಬಗ್ಗೆ ಆಸಕ್ತಿ ತೋರಬೇಕೆಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ಸ್‍ನ ಯೋಜನಾ ನಿರ್ದೇಶಕ ಕೆ.ಜಯಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: