ಮನರಂಜನೆ

ಹೆಸರು ಬದಲಾಯಿಸಿಕೊಂಡ ರವಿಚಂದ್ರನ್ ಪುತ್ರ ಮನೋರಂಜನ್

ಬೆಂಗಳೂರು,ನ.18-ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮನೋರಂಜನ್ ಬದಲು ಮನು ರಂಜನ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ಸಂಖ್ಯಾಶಾಸ್ತ್ರದ ಪ್ರಕಾರ ಹೆಸರು ಬದಲಾವಣೆ ಅಗತ್ಯ ಇದ್ದು, ತಮ್ಮ ಹೆಸರನ್ನು ಕೊಂಚ ಬದಲಾವಣೆ ಮಾಡಿ ಮನೋ ಬದಲು ಮನು ಆಗಿದ್ದಾರೆ. ಇನ್ನು ಮುಂದೆ ಸಿನಿಮಾಗಳ ಟೈಟಲ್ ಕಾರ್ಡ್ ನಲ್ಲಿಯೂ ಇದೇ ಹೆಸರು ಮುಂದುವರೆಯುತ್ತದೆ.

ಮನು ರಂಜನ್ ‘ಸಾಹೇಬ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದರು. ಆ ಸಿನಿಮಾ ಕೆಲವು ಪ್ರೇಕ್ಷಕರಿಗೆ ಇಷ್ಟ ಆಯ್ತು. ನಂತರ ಬಿಡುಗಡೆಯಾದ ‘ಬೃಹಸ್ಪತಿ’ ಯಶಸ್ವಿಯಾಗಲಿಲ್ಲ. ಇದೀಗ ಮೂರನೇ ಸಿನಿಮಾದ ಮೂಲಕ ಮನು ರಂಜನ್ ಬದಲಾವಣೆ ಬಯಸಿದ್ದಾರೆ. ಅದು ಅವರ ಹೆಸರಿನಲ್ಲಿಯೇ ಶುರುವಾಗಿದೆ.

ಇತ್ತೀಚಿಗಷ್ಟೆ ತಮ್ಮ ‘ಮುಗಿಲ್ ಪೇಟೆ’ ಸಿನಿಮಾ ಲಾಂಚ್ ಆಗಿದೆ. ಈ ಸಿನಿಮಾದ ಪೋಸ್ಟರ್ ನಲ್ಲಿಯೂ ಮನು ರಂಜನ್ ಎಂದು ಬರೆಯಲಾಗಿದೆ. ಭರತ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. ಖಯಾದು ಮೋಹನ್ ಲೋರಾ ಸಿನಿಮಾದ ನಾಯಕಿಯಾಗಿದ್ದಾರೆ.

‘ಗಾಳಿಪಟ’ ಸಿನಿಮಾದಲ್ಲಿ ‘ಮುಗಿಲ್ ಪೇಟೆ’ ಎಂಬ ಊರಿನ ಹೆಸರು ಫೇಮಸ್ ಆಗಿದ್ದು, ಅದೇ ಈ ಸಿನಿಮಾದ ಶೀರ್ಷಿಕೆಯಾಗಿದೆ. ಸಿನಿಮಾ ಒಂದು ಲವ್ ಸ್ಟೋರಿಯಾಗಿದೆ. ಇದು ಮನು ರಂಜನ್ ನಟನೆಯ ನಾಲ್ಕನೇ ಸಿನಿಮಾ. (ಎಂ.ಎನ್)

 

Leave a Reply

comments

Related Articles

error: