ಮನರಂಜನೆ

ಅನಿಲ್ ಕುಂಬ್ಳೆ ಅವರ ಚಾಲೆಂಜ್ ಸ್ವೀಕರಿಸಿದ ಗಾಯಕ ವಿಜಯ್ ಪ್ರಕಾಶ್

ಬೆಂಗಳೂರು,ನ.18-ಕನ್ನಡ ರಾಜ್ಯೋತ್ಸವವನ್ನು ಸ್ಯಾಂಡಲ್ ವುಡ್ ಮಂದಿ ಈ ಬಾರಿ ಕನ್ನಡ ಕವನ ಓದುವ ಅಭಿಯಾನದ ಮೂಲ ವಿಶೇಷವಾಗಿ ಆಚರಿಸುತ್ತಿದ್ದಾರೆ.

ಕನ್ನಡ ಕವನ ಓದುವ ಅಭಿಯಾನದಲ್ಲಿ ಸ್ಯಾಂಡಲ್ ವುಡ್ ನ ತಾರೆಯರು ಮಾತ್ರವಲ್ಲದೆ, ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಸಹ ಪಾಲ್ಗೊಂಡಿದ್ದರು.

ಅನಿಲ್ ಕುಂಬ್ಳೆ ಕನ್ನಡ ಕವನ ಓದುವ ಚಾಲೆಂಜ್ ಅನ್ನು ಯಶಸ್ವಿಯಾಗಿ ಪೂರೈಸಿದ ಬಳಿಕ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಗೆ ಸವಾಲು ಹಾಕಿದ್ದರು. ಇದೀಗ ಸವಾಲು ಸ್ವೀಕರಿಸಿರುವ ಗಾಯಕ ವಿಜಯ್ ಪ್ರಕಾಶ್, ಡಿ.ವಿ.ಗುಂಡಪ್ಪ ಅವರ ಪದ್ಯವನ್ನು ಓದಿದ್ದಾರೆ. ಕೇವಲ ಓದಿದ್ದಲ್ಲದೆ ಪದ್ಯವನ್ನು ಹಾಡಿನ ರೂಪದಲ್ಲೂ ಹೇಳಿ ಕನ್ನಡ ತನ ಮೆರೆದಿದ್ದಾರೆ.

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ, ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ, ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ, ಸಣ್ಣತನ ಸವೆಯುವುದು ಮಂಕುತಿಮ್ಮ ಪದ್ಯ ಓದಿದ್ದಾರೆ.

ಸವಾಲನ್ನು ಎಲ್ಲಾ ಕನ್ನಡಿಗರು ಸ್ವೀಕರಿಸುವಂತೆ ಹೇಳಿದ್ದಾರೆ. ತಾಯಿ ಮಕ್ಕಳಿಗೆ ಹೇಳುವುದಾಗಲಿ, ಶಿಕ್ಷಕರು, ಆಟೋ ಚಾಲಕರಾಗಲಿ ಎಲ್ಲರು ಈ ಅಭಿಯಾನದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.

ಇನ್ನು ಅನಿಲ್ ಕುಂಬ್ಳೆ ಅವರ ಸವಾಲನ್ನು ಕಿಚ್ಚ ಸುದೀಪ್ ಕೂಡ ಸ್ವೀಕರಿಸಿದ್ದಾರೆ. ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಸವಾಲನ್ನು ಸ್ವೀಕರಿಸಿದ್ದೇನೆ. ಸದ್ಯದಲ್ಲೇ ಪದ್ಯ ವಾಚನ ಮಾಡುವುದಾಗಿ ಹೇಳಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಕವನ ಓದುವ ಸವಾಲನ್ನು ಅನಿಲ್ ಕುಂಬ್ಳೆಗೆ ನೀಡಿದ್ದರು. ಈ ಮೂಲಕ ಸ್ಯಾಂಡ್ವುಡ್ನಿಂದ ಕ್ರೀಡೆಗೂ ಕನ್ನಡ ಓದುವ ಸವಾಲು ಪಸರಿಸಿತ್ತು. ಅದರಂತೆ ಚಾಲೆಂಜ್ ಅನ್ನು ಸ್ವೀಕರಿಸಿದ್ದ ಅನಿಲ್ ಕುಂಬ್ಳೆ, ರಾಷ್ಟ್ರಕವಿ ಕುವೆಂಪು ಅವರಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯಪದ್ಯ ಓದಿದ್ದರು.

ಕವನ ಚಾಲೆಂಜ್ ನಟ ಯಶ್ ಮೂಲಕ ಪ್ರಾರಂಭ ಆಗಿತ್ತು. ಹಿರಿಯ ಪತ್ರಕರ್ತರೊಬ್ಬರು ನೀಡಿದ ಸವಾಲನ್ನು ಯಶ್ ಸ್ವೀಕಾರ ಮಾಡಿ ಕುವೆಂಪು ಪದ್ಯ ಓದಿದ್ದರು. ನಂತರ ಅದನ್ನು ನಿರ್ದೇಶಕ ನಾಗಾಭರಣ, ಗೀತಾ ಸಾಹಿತಿ ಡಾ.ವಿ ನಾಗೇಂದ್ರ ಪ್ರಸಾದ್, ಹಾಸ್ಯ ನಟ ಚಿಕ್ಕಣ್ಣ, ರವಿಶಂಕರ್ ಗೌಡ ಹಾಗೂ ರವಿಶಂಕರ್ ರಿಗೆ ನೀಡಿದ್ದರು. ಈಗ ಚಾಲೆಂಜ್ ಹಾಗೆ ಮುಂದುವರೆಯುತ್ತ ಹೋಗುತ್ತಿದೆ. (ಎಂ.ಎನ್)

Leave a Reply

comments

Related Articles

error: