ಕ್ರೀಡೆ

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ: ವಿಡಿಯೋ ವೈರಲ್

ಮುಂಬೈ,ನ.18-ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಮೊದಲ ಬಾರಿಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಅವರ ಜಿಮ್ ಟ್ರೈನರ್ ಆಗಿರುವ ಯಾಸ್ಮಿನ್ ಕರಾಚಿವಾಲ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾರ್ದಿಕ್ ಪಾಂಡ್ಯರ ವರ್ಕೌಟ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಾಗಿ ಆರು ತಿಂಗಳ ಮೊದಲೇ ಹಾರ್ದಿಕ್ ಕಠಿಣ ಪರಿಶ್ರಮ ಮಾಡುತ್ತಿದ್ದಾರೆ. ಬೆನ್ನು ಮೂಳೆ ಗಟ್ಟಿಯಾಗಲು ಮತ್ತು ಆದಷ್ಟು ಬೇಗ ತಂಡ ಸೇರಲು ಪಾಂಡ್ಯ ಕಠಿಣ ಪರಿಶ್ರಮ ಮಾಡುತ್ತಿದ್ದಾರೆ ಎಂದು ಯಾಸ್ಮಿನ್ ಬರೆದುಕೊಂಡಿದ್ದಾರೆ.

ಕಳೆದ ವಿಶ್ವಕಪ್ ನಂತರ ಹಾರ್ದಿಕ್ ಯಾವುದೇ ಪಂದ್ಯವಾಡಿಲ್ಲ. ಬೆನ್ನು ನೋವಿಗೆ ಒಳಗಾಗಿದ್ದ ಹಾರ್ದಿಕ್ ಕಳೆದ ತಿಂಗಳು ಲಂಡನ್ ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. (ಎಂ.ಎನ್)

Leave a Reply

comments

Related Articles

error: