
ಮೈಸೂರು
ಹನ್ನೆರಡು ವರ್ಷಗಳ ನಂತರ ತುಂಬಿದ ವಡವಿನಕಟ್ಟೆ ಕೆರೆ : ಬಾಗಿನ ಅರ್ಪಿಸಿದ ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ನ.18:- ಹನ್ನೆರಡು ವರ್ಷಗಳ ನಂತರ ಮೈಸೂರು ತಾಲೂಕು ಜಯಪುರ ಹೋಬಳಿ ಮದ್ದೂರು ಗ್ರಾಮದ ವಡವಿನಕಟ್ಟೆ ಕೆರೆ ತುಂಬಿದೆ.
ಶಾಸಕ ಜಿ.ಟಿ.ದೇವೇಗೌಡ ಅವರು ಬಾಗಿನ ಅರ್ಪಿಸಿದರು. 173 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಸಾವಿರಾರು ಎಕ್ರೆ ಅಚ್ಚುಕಟ್ಟು ಹೊಂದಿದ್ದು, ಈ ಭಾಗದ ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಭಾಗದ ರೈತರ ಹಲವಾರು ವರ್ಷಗಳ ಕನಸು ನನಸು ಆಗಿದೆ. ಹನ್ನೆರಡು ವರ್ಷಗಳ ನಂತರ ತುಂಬಿದ ವಡವಿನಕಟ್ಟೆ ಕೆರೆ ಮೈಸೂರು ತಾಲೂಕು ಜಯಪುರ ಹೋಬಳಿ ಮದ್ದೂರು ಗ್ರಾಮದ ವಡವಿಕಟ್ಟೆ ಕೆರೆಗೆ ಶಾಸಕ ಜಿ.ಟಿ.ದೇವೇಗೌಡರು ಬಾಗಿನ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)