ಪ್ರಮುಖ ಸುದ್ದಿಮೈಸೂರು

ನ.23ರಂದು ರಾಗಾರೋಗ್ಯ ಸಂಗೀತ

ಮೈಸೂರು,ನ.19 : ನಗರದ ಉನ್ನತಿ ಸಂಸ್ಥೆ ವತಿಯಿಂದ ಇದೇ ನ. 23ರ ಸಂಜೆ ಆರಕ್ಕೆ ನಗರದ ಕಲಾಮಂದಿರದಲ್ಲಿ ಹೃದಯ ವ್ಯಾಧಿ, ಪರಿಹಾರದ ಹಾದಿ ಎಂಬ ಶೀರ್ಷಿಕೆ ಅಡಿಯಲ್ಲಿ ಹೃದಯ ಆರೋಗ್ಯ ರಕ್ಷಣೆಯಲ್ಲಿ ರಾಗಗಳ ಸಂಗೀತ ಕಾರ್ಯಕ್ರಮವಾದ ರಾಗಾರೋಗ್ಯ ಆಯೋಜಿಸಲಾಗಿದೆ ಎಂದು ಸಂಸ್ಥೆಯ ರೂಪಶ್ರೀ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ರಾಗಾಧಾರಿತ ಪಾಶ್ಚಾತ್ಯ ಸಂಗೀತ, ಚಿತ್ರಗೀತೆ, ರಂಗಗೀತೆ, ಭಾವಗೀತೆ ವಚನ ಮೊದಲಾದವನ್ನು ಹಾಡಿ, ಅವು ಭಾವನಾತ್ಮಕತೆ ಬೆಳೆಸುವ ಮೂಲಕ ಹೃದಯದ ಆರೋಗ್ಯಕ್ಕೆ ಹೇಗೆ ಅನುಕೂಲವಾಗಲಿವೆ ಎಂಬುದನ್ನು ತಿಳಿಸಲಾಗುವುದೆಂದರು.

ಜೊತೆಗೆ, ಚನ್ನಪ್ಪ ಹಾಗೂ ಶ್ರೀಹರಿ ದ್ವಾರಕಾನಾಥ್ ಅತಿಥಿಯಾಗಿದ್ದು, ಖ್ಯಾತ ಗಾಯಕ ಶ್ರೀಹರ್ಷ ಮೊದಲಾದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದರು.

ಡಾ. ಸಾಗರ್ ದೇಶಪಾಂಡೆ, ಸುಂದರೇಶ್, ಜಿಎಸ್‌ಎಸ್ ಪ್ರತಿಷ್ಠಾನದ ಶ್ರೀಹರಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: