ಪ್ರಮುಖ ಸುದ್ದಿಮೈಸೂರು

ನ.23ರಂದು ಟೈಕಾನ್ ನಿಂದ ಹೂಡಿಕೆದಾರರ ಸಮಾವೇಶ

ಮೈಸೂರು. ನ.19 : ಉದ್ಯಮಿಗಳಿಗೆ ನೆರವಾಗುವ ಹಾಗೂ ಹೊಸ ಉದ್ಯಮಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಇದೇ ನ. 23 ರಂದು ನಗರದ ರ‍್ಯಾಡಿಸನ್ ಬ್ಲ್ಯೂ ಪ್ಲಾಜಾ ಹೊಟೇಲ್‌ನಲ್ಲಿ ಟೈಕಾನ್ ಎಂಬ ಉದ್ಯಮಿಗಳ ಹಾಗೂ ಹೂಡಿಕೆದಾರರ ಸಮಾವೇಶ ಟೈಕಾನ್ ಆಯೋಜಿಸಲಾಗಿದೆ ಎಂದ ಉದ್ಯಮಿ ಪವನ್ ರಂಗ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9 ಕ್ಕೆ ನೋಂದಣಿ, 9.30ಕ್ಕೆ ಸಮಾವೇಶ ಆರಂಭವಾಗಲಿದೆ. ಉದ್ಯಮಿಗಳ ವೇದಿಕೆಯಾದ ಟೈ ಏಂಜೆಲ್ಸ್ ಸಹಕಾರದೊಂದಿಗೆ ಈ ಸಮಾವೇಶ ಆಯೋಜಿಸಿದ್ದು, ಉದ್ಯಮ ಸ್ಥಾಪನೆ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದಾಗಿದೆ ಎಂದರು.

ಟೈ ಏಂಜೆಲ್ಸ್ ನಿರ್ದೇಶಕ ಅಜಿತ್ ಪೈ ಮಾತನಾಡಿ, ಈ ವೇಳೆ ಹೊಸದಾಗಿ ಉದ್ಯಮ ಸ್ಥಾಪಿಸಬಯಸುವವರಿಗೆ ಅಗತ್ಯ ಇರುವ ಬಂಡವಾಳ ಕೊರತೆ, ಮೊದಲಾದ ಸವಾಲು ಎದುರಿಸುವಲ್ಲಿ ಯಶಸ್ವಿ ಉದ್ಯಮಿಗಳು ತಾವು ಹಂಚಿಕೊಳ್ಳುವ ಅನುಭವ ಮಾಹಿತಿ ನೆರವಾಗಲಿದೆ.

ಇನ್ನು, ಸಮಾವೇಶದಲ್ಲಿ ಉದ್ಯಮಿಗಳಾದ ಸದಾನಂದ ಮೈಯ್ಯ, ಅರುಣ ರಾಮನ್, ಮೋನಿಕಾ ಶುಕ್ಲಾ, ಭಾವೂತ್ ಕೌರ್, ಅಬಿಷೇಕ್ ಲಾಥೆ ಮೊದಲಾದವರು ಅಮೂಲ್ಯ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆಂದು ವಿವರಿಸಿದರು.

ಅಲ್ಲದೆ, ಉದ್ಯಮಿಗಳೂ ನಗರದ ಬೆಳವಣಿಗೆಗೆ ಹೇಗೆ ಕಾರಣರಾಗಬಹುದು ಎಂಬ ನಿಟ್ಟಿನಲ್ಲಿ ಸಂಸ್ಥೆಯೊಂದ ನಗರದ ವಿವಿಧೆಡೆ ಸ್ಥಾಪಿಸುತ್ತಿರುವ ವಾಯು ಗುಣಮಟ್ಟ ಅಳೆಯುವ ಹಾಗೂ ಯಾವ ಯಾವ ಪ್ರದೇಶದಲ್ಲಿ ವಾಯುವಿನ ಗುಣಮಟ್ಟ ಹೇಗಿದೆ ಎಂಬ ಮಾಹಿತಿ ಸಾರ್ವಜನಿಕರಿಗೆ ನೀಡುವ ಸಾಧನಗಳಿಗೆ ಚಾಲನೆ ಸಹಾ ಅಂದು ದೊರೆಯಲಿದೆ ಎಂದು ತಿಳಿಸಿದರು.

ಪ್ರಮೋದ್, ಸಂಜಯ್, ಶ್ರೀನಿವಾಸಮೂರ್ತಿ, ಇನ್ನಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: