ಮೈಸೂರು

ಮೈಸೂರು ಜಿಲ್ಲೆಯಲ್ಲಿ ಐದು ದಿನಗಳ ಕಾಲ ಮೋಡ ಕವಿದ ವಾತಾವರಣ : ಮಳೆ ಬರುವ ಸಾಧ್ಯತೆಯಿಲ್ಲ

ಮೈಸೂರು,ನ,19:- ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈ ವಾರದ ಮುನ್ಸೂಚನೆಯಂತೆ ಮೈಸೂರು ಜಿಲ್ಲೆಯಲ್ಲಿ   20-11- 2019ರಿಂದ 24-11-2019 ವರೆಗೆ ಮೋಡ ಕವಿದ ವಾತಾವರಣವಿದ್ದು, ಮಳೆ ಬರುವ ಸಾಧ್ಯತೆಯಿಲ್ಲ. ಗರಿಷ್ಠ ಉಷ್ಣಾಂಶ 29- 30ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 18ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು  ನಾಗನಹಳ್ಳಿ  ಕೃಷಿ ಹವಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಬೆಳಗಿನ ಗಾಳಿಯ ತೇವಾಂಶ ಶೇಕಡ 73-75 ವರೆಗೆ ಮತ್ತು ಮಧ್ಯಾಹ್ನದ ತೇವಾಂಶ ಶೇಕಡ 62-65 ಮತ್ತು ಗಾಳಿಯು ಗಂಟೆಗೆ ಸರಾಸರಿ 2-3 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.

ಬದನೆ ಕಾಯಿ ಬಿಡುವ ಹಂತದಲ್ಲಿದ್ದು, ಟೊಂಗೆ ಮತ್ತು ಕಾಯಿ ಕೊರಕದ ನಿಯಂತ್ರಣಕ್ಕಾಗಿ ಒಣಗಿದ ಟೊಂಗೆಗಳನ್ನು ಹುಳುವಿನ ಸಮೇತ ಕಿತ್ತು ನಾಶಪಡಿಸಬೇಕು. ನಂತರ ಪ್ರತಿ ಲೀಟರ್ ನೀರಿಗೆ 0.6ಗ್ರಾಂ. ಇಮಿಡೋಕ್ಲೋಪ್ರಿಡ್ ಅಥವಾ ನಿಂಬಿಸಿಡಿನ್ 5 ಮಿ.ಲೀ. ಔಷಧಿಯನ್ನು ಬೆರೆಸಿ ಬೆಳೆಗೆ ಸಿಂಪಡಿಸಬೇಕು.

ಟೊಮೆಟೊ ಮತ್ತು ದೊಡ್ಡಮೆಣಸಿನಕಾಯಿ ಕಾಯಿ ಬಿಡುವ ಹಂತದಲ್ಲಿದ್ದು, ಹಣ್ಣು ಕೊಳೆರೋಗ ಕಂಡುಬಂದಿದ್ದು, ಇದರ ಹತೋಟಿಗೆ ಇಂಡೊಫಿಲ್-ಎಮ್-45 ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.

ಗುಲಾಬಿ ಹೂ ಬಿಡುವ ಹಂತದಲ್ಲಿದ್ದು   ಕಡಿಮೆ ಉಷ್ಣಾಂಶ ಮತ್ತು ಮೋಡದ ವಾತಾವರಣ ವಿರುವುದರಿಂದ ಗುಲಾಬಿಹೂವಿನ ಗಿಡದಲ್ಲಿ ಎಲೆ ಚುಕ್ಕೆ ರೋಗ ಕಂಡು ಬಂದಿದೆ. ಇದರ ಹತೋಟಿಗೆ ಬೆವಿಷ್ಟಿನ್ 1 ಗ್ರಾಂ ಔಷಧಿಯನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಚೆನ್ನಾಗಿ ನೆನೆಯುವಂತೆ ಸುರಿಯಬೇಕು/ಸಿಂಪರಣೆ ಮಾಡಬೇಕು.

ಜಾನುವಾರು,ರೇಷ್ಮೆ ಹಾಗೂ ಕೋಳಿ ಸಾಕಣೆ ಬೆಳಗಿನ ಜಾವ ಹಾಗೂ ರಾತ್ರಿ ವೇಳೆ ವಾತಾವರಣದ ಉಷ್ಣಾಂಶದಲ್ಲಿ ಸ್ವಲ್ಪ ಇಳಿತವಿರುವುದರಿಂದ ಜಾನುವಾರು,ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶದ ಸ್ಥಿರತೆಯನ್ನು ವಿದ್ಯುತ್ ಬಲ್ಫ್‍ನ ಶಾಖದ ಸಹಾಯದಿಂದ ಕಾಪಾಡಿಕೊಳ್ಳಬೇಕು.

ಜಾನುವಾರಗಳು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ಕಾಣಿಸಿಕೊಂಡಿದ್ದು, ಪ್ರಾಣಿಗಳು ಅತಿಯಾದ ಜ್ವರ, ಜೊಲ್ಲು ಸೋರುವುದು ಮತ್ತು ಬಾಯಿಯಲ್ಲಿ ಹುಣ್ಣು ಆಗಿ ಮೇವು ತಿನ್ನುವುದನ್ನು ಬಿಡುತ್ತವೆ. ಇದರ ಹತೋಟಿಗಾಗಿ ಪಶುವೈದ್ಯರ ಸೂಕ್ತ ಸಲಹೆಯಂತೆ ಔಷದ ಮತ್ತು ಚುಚ್ಚುಮದ್ದುಗಳನ್ನು ನೀಡಬೇಕು.

ಈ ಕೇಂದ್ರದಲ್ಲಿ ಎರೆಹುಳುಗಳು ಕೆ.ಜಿಗೆ 500ರೂ, ಹಾಗೂ ಉತ್ತಮ ಗುಣಮಟ್ಟದ ಚಕ್ತಮುನಿ,ಛಾಯಾ, ಹಿಪ್ಪುನೇರಳೆ (ವಿ-5), ಇನ್ಸುಲಿನ್, ಗ್ಲಿರಿಸೀಡಿಯಾ ಮತ್ತು ನುಗ್ಗೆ(ಪಿ.ಕೆ.ಎಂ-1) ಸಸಿಗಳು ಮಾರಾಟಕ್ಕೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ದೂರವಾಣಿ ಮೂಲಕ ಡಾ.ಪಿ,ಪ್ರಕಾಶ್, ಹಿರಿಯ ಕ್ಷೇತ್ರ ಅಧೀಕ್ಷಕರು/  .ಎನ್.ನರೇಂದ್ರಬಾಬು, ಸಹ ಸಂಶೋಧಕರು, ದೂರವಾಣಿ ಸಂಖ್ಯೆ. 9449869914/08212591267/9343532154 ಅವರನ್ನು ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: