ಪ್ರಮುಖ ಸುದ್ದಿಮೈಸೂರು

ಕೇಂದ್ರ ಹಾಗೂ ರಾಜ್ಯದಲ್ಲಿ  ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ, ಜನತೆ ತಕ್ಕ ಪಾಠ ಕಲಿಸಿ :ಶಾಸಕಿ ಸೌಮ್ಯಾರೆಡ್ಡಿ

ಮೈಸೂರು,ನ.20:- ಕೇಂದ್ರ ಹಾಗೂ ರಾಜ್ಯದಲ್ಲಿ  ಆಡಳಿತದಲ್ಲಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ಅದಕ್ಕಾಗಿ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಜಯನಗರದ ಶಾಸಕಿ ಸೌಮ್ಯಾರೆಡ್ಡಿ ಹೇಳಿದರು.

ಕಾಂಗ್ರೆಸ್ ಕಛೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು 15 ವಿಧಾನಸಭಾ  ಕ್ಷೇತ್ರದಲ್ಲಿ ಉಪಚುನಾವಣೆ ಬಂದಿದೆ. ಒಂದೂವರೆ ವರ್ಷದ ಒಳಗಡೆ ಯಾಕೆ ಚುನಾವಣೆ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಈ ಕ್ಷೇತ್ರದ ಎಲ್ಲ ಕಾಂಗ್ರೆಸ್ ಜೆಡಿಎಸ್ ಶಾಸಕರು ಪಕ್ಷ ಬಿಟ್ಡು ಸರ್ಕಾರ ಬೀಳಿಸಿದರು. ಅವರನ್ನು ಸುಪ್ರೀಂಕೋರ್ಟ್ ಅನರ್ಹರು ಎಂದಿದೆ. ಅವರ ಕ್ಷೇತ್ರದ ಮತದಾರರು ಅವರಿಗೆ ಮತ ನೀಡಿ ಆಶೀರ್ವದಿಸಿದರೂ ಕೂಡ ಅವರು ಪಕ್ಷ ಬಿಟ್ಟು ಜನರಿಗೆ ದ್ರೋಹ ಮಾಡಿದ್ದಾರೆ ಎಂದರು.

ಜನತೆ ಈ ಬಾರಿ ಹುಣಸೂರು ಅಭ್ಯರ್ಥಿ ಮಂಜುನಾಥ್ ಅವರನ್ನು ಆಶೀರ್ವದಿಸಬೇಕು. ಅವರಿಗೆ ಮತ ನೀಡಬೇಕು. ಅವರು ಈ ಹಿಂದೆ ಶಾಸಕರಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರನ್ನು ಆಯ್ಕೆ ಮಾಡಿದರೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ನಡೆಯಲಿದೆ ಎಂದು ತಿಳಿಸಿದರು. ಬೇರೆ ಪಕ್ಷಕ್ಕೆ ಹೋಗಬಾರದು. ಜನರು ಮತ ಹಾಕಿ ಗೆಲ್ಲಿಸಿದ ಮೇಲೆ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಇದೇ ರೀತಿ ಮತ್ತೊಮ್ಮೆ ಆಗಬಹುದು. ಸರ್ಕಾರ ಬೀಳಬಹುದು. ಜನರು ಅವರಿಗೆ ಪಾಠ ಕಲಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಮೂರು ತಿಂಗಳ ಮೇಲಾಯ್ತು.  ಎಷ್ಟು ಕೆಲಸ ಮಾಡಿದೆ ಎನ್ನುವುದು ಜನರಿಗೆ ಗೊತ್ತಿದೆ. ಭೀಕರವಾದ ಪ್ರವಾಹ ಬಂದಿದೆ. ಸುಮಾರು ಒಂದು ಶತಮಾನ ಇಂತಹ ಭೀಕರ ಪ್ರವಾಹ ಬಂದಿರಲಿಲ್ಲ. ಲಕ್ಷಾಂತರ ಜನರಿಗೆ ತೊಂದರೆಯಾಗಿದೆ. 1200ಕೋಟಿ ಪರಿಹಾರ ನೀಡಿದರು. 30ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಕೆಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ, ಸಂತ್ರಸ್ಥರ ಬಗ್ಗೆ ಕಾಳಜಿ ಇಲ್ಲ,  ರೈತರ ಬಗ್ಗೆ ಕಾಳಜಿ ಇಲ್ಲ, ಕಾಂಗ್ರೆಸ್ ಸರ್ಕಾರ ಅದೆಷ್ಟೋ ಜನಪರ ಯೋಜನೆಗಳನ್ನು ನೀಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಸಂಯುಕ್ತಾ, ಪುಷ್ಪಲತಾ ಮತ್ತಿತತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: