ಪ್ರಮುಖ ಸುದ್ದಿಮೈಸೂರು

ತನ್ವೀರ್ ಸೇಠ್ ಹಲ್ಲೆಕೋರನ ಬಗ್ಗೆ ಎಸ್ ಡಿಪಿಐ ಹೇಳಿದ್ದೇನು ?!

ದ್ವೇಷ-ಅಸೂಯೆ ರಾಜಕಾರಣದಿಂದ ಪಕ್ಷ ನಿಷೇಧಿಸುವುದಿದ್ದರೆ 'ಬಿಜೆಪಿ'ಯನ್ನು ನಿಷೇಧಿಸಿ

ಮೈಸೂರು. ನ.20: ಶಾಸಕ ತನ್ವೀರ್ ಸೇಠ್ ರವರ ಮೇಲೆ ನಡೆದಿರುವ ಹಲ್ಲೆ ವೈಯುಕ್ತಿಕವಾಗಿದ್ದು, ಆದ್ದರಿಂದ ಆ ವಿದ್ವಂಸಕ ಕೃತ್ಯಕ್ಕೂ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಇದಕ್ಕೆ ಪಕ್ಷ ಹೊಣೆಯಾಗುವುದಿಲ್ಲ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀಸ್ ಸ್ಪಷ್ಟಪಡಿಸಿದರು.

ಬುಧವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ, ಆತ ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿದ್ದು ಈಚೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಪ್ರಚಾರಕನಾಗಿ ಕಾರ್ಯನಿರ್ವಹಿಸಿದ್ದ, ಆದ್ರಿಂದ ತಮ್ಮ ಪಕ್ಷ ಕಾರ್ಯಕರ್ತನಾಗಿದ್ದರೂ ಸಹ ಆತ ಮಾಡಿರುವ ವಿದ್ವಾಂಸಕ ಕೃತ್ಯಕ್ಕೆ ಪಕ್ಷ ಜವಾಬ್ದಾರಿಯಾಗಿರುವುದಿಲ್ಲ ಎಂದು ತಿಳಿಸಿದರು.

ನಾನೆಂದಿಗೂ ದ್ವೇಷ, ಅಸೂಯೆ, ವೈಷಮ್ಯದ ರಾಜಕಾರಣ ಮಾಡುವುದಿಲ್ಲ, ಒಂದೊಮ್ಮೆ ಅಂತಹ ಸಂದರ್ಭ ಬಂದರೆ ರಾಜಕೀಯದಿಂದಲೇ ನಿವೃತ್ತನಾಗುವೆ ಎಂದು ಅವರು, ಅಲ್ಲದೇ ಈ ಹಿಂದೆ ಶಾಸಕ ತನ್ವೀರ್ ಸೇಠ್ ನೊಂದಿಗೆ ಚುನಾವಣೆಯಲ್ಲಿ ಸೆಣೆಸಿದ್ದೇ ಆದರೆ ಇಂದಿಗೂ ಅವರೊಂದಿಗೆ ನಾನು ಸೌಹಾರ್ಧಯುತವಾಗಿಯೇ ಇರುವೇ ಎಂದರು.

ಹಲ್ಲೆ ವಿಷಯವಾಗಿ ಕ್ಷುಲಕ ರಾಜಕಾರಣ ನಡೆಸುವ ಚಾಳಿ ಬಿಡಬೇಕು ಎಂದು ಹೆಸರು ಉಲ್ಲೇಖಿಸದೇ ಮಾಜಿ ಸಚಿವರೊಬ್ಬರ ವಿರುದ್ಧ ಕಿಡಿಕಾರಿ. ಇದೊಂದು ವೈಯಕ್ತಿಕ ದಾಳಿಯಾಗಿದ್ದು ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ನಂತರವೇ ಸತ್ಯಾಂಶ ಹೊರ ಬರಬೇಕಾಗಿದ್ದು ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕೆಂದು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿರುವೇ.‌

ವಿಷಯವಾಗಿ ರಾಜಕೀಯ ಬಣ್ಣ ಪಡೆದಿದ್ದು ಪದೇ ಪದೇ ಪಕ್ಷವನ್ನು ಬಿಂಬಿಸುತ್ತಿರುವುದು ಖೇಧಕರ, ಅಲ್ಲದೇ ಹದಿನೈದು ರಾಜ್ಯಗಳಲ್ಲಿ ಪಕ್ಷ ಸಕ್ರಿಯವಾಗಿದ್ದು ಇದನ್ನು ಸಹಿಸದ ಕೆಲವರು ಪಕ್ಷ ವಿರುದ್ಧ ಸುಳ್ಳು ಆರೋಪ ಮೂಲಕ ಅಪಪ್ರಚಾರ ಮಾಡುತ್ತಿದ್ದು ಇದರಿಂದ ಹುಣಸೂರು ಉಪಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

1925 ರಿಂದಲೇ ದ್ವೇಷ, ಅಸೂಯೆ ಹಾಗೂ ಮತೀಯ ಗಲಭೆಯನ್ನು ಪ್ರಚೋಧಿಸುವ ಮೂಲಕ ಬಿಜೆಪಿ ಅಧಿಕಾರ ಹಿಡಿಯುತ್ತಿದ್ದು, ಒಂದೊಮ್ಮೆ ನಿಷೇಧಿಸಬೇಕಿದ್ದರೆ ದೇಶದಲ್ಲಿ ಮೊದಲು ಬಿಜೆಪಿಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಹುಣಸೂರು ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: