ಮನರಂಜನೆ

ರಾಕಿಂಗ್ ಸ್ಟಾರ್ ಯಶ್ ನೋಡಲು ಫಿಲಿಪೈನ್ಸ್ ನಿಂದ ಬಂದ ಅಭಿಮಾನಿ!

ರಾಜ್ಯ(ಬೆಂಗಳೂರು)ನ.20:- ಚಂದನವನದ ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಫಿಲಿಪೈನ್ಸ್ ನಿಂದ ಅಭಿಮಾನಿಯೊಬ್ಬರು ಬಂದಿದ್ದಾರೆ.

ತಮಗಾಗಿ ವಿದೇಶದಿಂದ ಬಂದಿದ್ದ ಈ ಅಭಿಮಾನಿಯನ್ನು ಯಶ್ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮೊನ್ನೆಯಷ್ಟೇ  ಅಭಿಮಾನಿ ಪೇಟೆ ಅಶೋಕ್ ಜೋರ್ನಲ್ ಯಶ್ ರನ್ನು ಭೇಟಿಯಾಗಬೇಕೆಂದು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದರು.

ಈ ಬಗ್ಗೆ ತಿಳಿದ ಯಶ್ ಭೇಟಿಯಾಗಿದ್ದಾರೆ ಹಾಗೆಯೇ ಅಭಿಮಾನಿ ಜೊತೆಗೆ ಮಾತನಾಡಿ ಸಿಹಿಯನ್ನೂ ತಿನಿಸಿದ್ದಾರೆ. ಈ ಅಭಿಮಾನಿ ಏರ್ ಪೋರ್ಟ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: