ಪ್ರಮುಖ ಸುದ್ದಿಮೈಸೂರು

ದಿ.25ರಿಂದ ನಾಗೇಶ್ ನ್ಯಾಷನಲ್ ಲೆವೆಲ್ ಬ್ಲೈಂಡ್ ಕ್ರಿಕೆಟ್ ಟೂರ್ನ್ಮೆಂಟ್

ಮೈಸೂರು.ನ.20 : ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಫಾರ ಬ್ಲೈಂಡ್, ಸಮರ್ಥನಂ ಅಂಗವಿಕಲ ಸಂಸ್ಥೆ, ಸಹಯೊಗದಲ್ಲಿ . ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ20 ಅಂಧರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಮರ್ಥನಂ ಅಂಗವಿಕಲ ಸಂಸ್ಥೆಯ ಸಂಸ್ಥಾಪನ ಟ್ರಸ್ಟಿ ಜಿ.ಕೆ.ಮಹಾಂತೇಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದಿ. 25 ರಿಂದ 27ರವರೆಗೆ ನಗರದ ಎಸ್.ಜೆ.ಸಿಇ ನ ಕೆಎಸ್ಸಿಎ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಡೆಲ್ಲಿ, ಹರಿಯಾಣ, ಗೊವಾ, ಕರ್ನಾಟಕ ಎ ತಂಡ ಪ್ರತಿನಿಧಿಸಿದ ಸುಮಾರು 336 ಕ್ರೀಡಾಪಟುಗಳು 20ಕ್ಕೂ ಹೆಚ್ಚು ತಂಡಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇದು ನಾಗೇಶ್ ಟ್ರೋಫಿಯ ಎರಡನೇ ವರ್ಷದ ಪಂದ್ಯಾವಳಿಯಾಗಿದ್ದು ವಿಜೇತರಿಗೆ ಒಂದು ಲಕ್ಷ, ಎರಡನೇ ಸ್ಥಾನಕ್ಕೆ 75 ಸಾವಿರ, 3 ಮತ್ತು 4ನೇ ಸ್ಥಾನಕ್ಕೆ 40 ಸಾವಿರ ರೂ.ಗಳು ಹಾಗೂ ಟ್ರೋಫಿ ನೀಡಲಾಗುವುದು, ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುವಿಗೆ ಭಾರತದ ಅಂಧರ ತಂಡ ಪ್ರತಿನಿಧಿಸಲು ಅವಕಾಶವಿರುವುದು ಎಂದರು

ಭಾರತ ತಂಡದ ಉಪ ನಾಯಕ ಪ್ರಕಾಶ ಜಯರಾಂ, ಪಿ.ವಿ.ರಾಜೇಂದ್ರ, ಕೆ.ವಿ.ರಾಜಣ್ಣ, ಚಂದ್ರಶೇಖರ್ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: