ಸುದ್ದಿ ಸಂಕ್ಷಿಪ್ತ

ಪತ್ರಕರ್ತರಿಗೆ ಆರೋಗ್ಯ ಸೌಲಭ್ಯ ಕಾರ್ಡ್ : ಸದುಪಯೋಗಕ್ಕೆ ಮನವಿ

ಮಡಿಕೇರಿ ನ.20 :- ರಾಜ್ಯದಲ್ಲಿನ ಕಾರ್ಯನಿರತ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗಕ್ಕೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕೆಂಬ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಾಡಿದ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು ಇದೀಗ ಮಾನ್ಯತೆ ಪತ್ರಕರ್ತರಿಗೆ ಆರೋಗ್ಯ ಸೌಲಭ್ಯ ಕಾರ್ಡ್‍ಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಕೊಡಗಿನ ಪತ್ರಕರ್ತರೂ ಪಡೆದುಕೊಳ್ಳುವಂತೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸವಿತಾರೈ ಮನವಿ ಮಾಡಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಮಾನ್ಯತೆ ಪಡೆದ ಪತ್ರಕರ್ತರಿಗೆ ವಾರ್ತಾ ಇಲಾಖೆಯಿಂದ ಆರೋಗ್ಯ ಕಾರ್ಡ ನೀಡುತ್ತಿರುವ ಹಿನ್ನೆಲೆಯ ಪತಿ/ಪತ್ನಿ, ಮಕ್ಕಳ ವಿವರವನ್ನು ದಿ.23-11-2019 ರೊಳಗಾಗಿ ಆಯಾ ಜಿಲ್ಲೆಯ ವಾರ್ತಾ ಇಲಾಖೆ ಕಚೇರಿಗೆ ಸಲ್ಲಿಸಬಹುದಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: