ಮನರಂಜನೆ

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸುಪ್ರೀತಾ ಶೆಟ್ಟಿ

ಬೆಂಗಳೂರು,ನ.21-ನಟಿ ಸುಪ್ರೀತಾ ಶೆಟ್ಟಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಪ್ರೀತಾ ಶೆಟ್ಟಿ ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ-ಮಗು ಆರೋಗ್ಯವಾಗಿದ್ದಾರೆ. ಗಂಡು ಮಗುವಿನ ಆಗಮನದಿಂದ ಸುಪ್ರೀತಾ ಶೆಟ್ಟಿ ಮತ್ತು ನಟ ಪ್ರಮೋದ್ ಶೆಟ್ಟಿ ದಂಪತಿ ಖುಷಿಯಾಗಿದ್ದಾರೆ.

ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿಗೆ ಇದು ಎರಡನೇ ಮಗು. ಈಗಾಗಲೇ ಈ ದಂಪತಿಗೆ ಹೆಣ್ಣು ಮಗುವಿದೆ.

ಇತ್ತೀಚೆಗಷ್ಟೇ ಪತ್ನಿ ಸುಪ್ರೀತಾ ಶೆಟ್ಟಿಯ ಸೀಮಂತ ಸಮಾರಂಭವನ್ನ ಪ್ರಮೋದ್ ಶೆಟ್ಟಿ ಅದ್ಧೂರಿಯಾಗಿ ಆಯೋಜಿಸಿದ್ದರು. ಕಿರುತೆರೆ ಮತ್ತು ಚಿತ್ರರಂಗದ ನಟ-ನಟಿಯರು ಸೀಮಂತ ಸಂಭ್ರಮದಲ್ಲಿ ಭಾಗವಹಿಸಿ ಸುಪ್ರೀತಾ ಶೆಟ್ಟಿಗೆ ಹರಸಿದ್ದರು.

ಸುಪ್ರೀತಾ ಶೆಟ್ಟಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದರು. 2006ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟ ಇವರು ಇಲ್ಲಿಯವರೆಗೆ 60 ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಸುಪ್ರೀತಾ ಬೆಳೆದಿದ್ದು ಕುಂದಾಪುರದಲ್ಲಿ. ಮನೆಯವರ ವಿರೋಧದ ನಡುವೆಯೂ ‘ರಂಗ ಸೌರಭ’ ಎಂಬ ರಂಗತಂಡದಲ್ಲಿ ತೊಡಗಿಸಿಕೊಂಡು ಸುಮಾರು 6 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ.

ಪ್ರಮೋದ್ ಶೆಟ್ಟಿ ಕಿರಿಕ್ ಪಾರ್ಟಿ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಉಳಿದವರು ಕಂಡಂತೆ, ರುಕ್ಕಿ, ಬೆಲ್ ಬಾಟಂ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಶೆಟ್ಟಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. (ಎಂ.ಎನ್)

Leave a Reply

comments

Related Articles

error: