ಮೈಸೂರು

ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ : ಹಲ್ಲೆ ನಡೆಸಿದ ಆರೋಪಿಗೆ ವ್ಯವಸ್ಥಿತ ತರಬೇತಿ ನೀಡಲಾಗಿತ್ತು ; ತನಿಖೆ ವೇಳೆ ಬಯಲು

ಮೈಸೂರು,ನ.21:-  ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು ಹಲ್ಲೆ ನಡೆಸಿದ ಆರೋಪಿಗೆ ವ್ಯವಸ್ಥಿತ ತರಬೇತಿ ನೀಡಲಾಗಿತ್ತು ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.

ಪ್ರಕರಣ ಸಂಬಂಧ ಮೈಸೂರು ನಗರ ಪೊಲೀಸರು ತನಿಖೆ ಮುಂದುವರೆಸಿದ್ದು, ಆರೋಪಿ ಫರ್ಹಾನ್ ಪಾಷಾ ಹಲ್ಲೆ ನಡೆಸಿದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆರೋಪಿ ಫರ್ಹಾನ್ ಸಂಗೀತ ಕಾರ್ಯಕ್ರಮದಲ್ಲಿ ಹೊಂಚು ಹಾಕಿ  ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ್ದ.  ಚಾಕುವಿನಿಂದ ನೇರವಾಗಿ ಕತ್ತಿಗೆ ಇರಿದಿದ್ದ.

ಈ ನಡುವೆ ಹಲ್ಲೆ ನಡೆಸಿದ ಆರೋಪಿ ಫರ್ಹಾನ್ ಪಾಷಾಗೆ  ವ್ಯವಸ್ಥಿತ ತರಬೇತಿ ನೀಡಲಾಗಿತ್ತು ಎಂಬುದು ತನಿಖೆ ವೇಳೆ   ಬಯಲಾಗಿದೆ.   ತರಬೇತಿ ಎಲ್ಲಿ, ಹೇಗೆ ನೀಡಲಾಗಿತ್ತು ಎಂಬುದರ ಬಗ್ಗೆ ಖಾಕಿ ಪಡೆ ವಿಚಾರಣೆ ನಡೆಸುತ್ತಿದೆ. ಈ ನಡುವೆ ಆರೋಪಿ ಫರ್ಹಾನ್ ಮೊಬೈಲ್ ಕರೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು,  ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: