ಮೈಸೂರು

ರೈತರ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆ : ಡಿಸಿ ಮತ್ತು  ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿದ ಸಿಜೆಎಂ ನ್ಯಾಯಾಲಯ ‌

ಮೈಸೂರು,ನ.21:-  ರೈತರ ಜಮೀನಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ  ಡಿಸಿ ಎಸಿ ಕಾರುಗಳ ಜಪ್ತಿಗೆ  ಕೋರ್ಟ್ ಅಧಿಕಾರಿಗಳು ಮುಂದಾಗಿದ್ದು, ಡಿಸಿ ಮತ್ತು  ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ  ಮೈಸೂರು ಸಿಜೆಎಂ ನ್ಯಾಯಾಲಯ ಆದೇಶ ನೀಡಿದೆ.

ಕೋರ್ಟ್ ಅಧಿಕಾರಿಗಳನ್ನು ನೋಡಿ  ಡಿಸಿ ಮತ್ತು ಎಸಿ ಕಾರನ್ನು ಕಾರು ಚಾಲಕ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಸಾತಗಳ್ಳಿ ಭಾಗದ ಪ್ರದೇಶದ ನಿವಾಸಿಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕಿತ್ತು. ಮಧುವನ ಸೊಸೈಟಿಗೆ ಜಮೀನು  ಜಿಲ್ಲಾಡಳಿತ ಜಮೀನು ನೀಡಿತ್ತು. ಸುಮಾರು 72 ಎಕರೆ ಜಮೀನು ಹಸ್ತಾಂತರವಾಗಿದ್ದು, 20 ವರ್ಷಗಳ ಹಿಂದೆಯೇ ಜಾಗ ಹಸ್ತಾಂತರಿಸಲಾಗಿತ್ತು. ಜಮೀನಿನ ಮಾಲೀಕರು 12 ವರ್ಷಗಳ ಹಿಂದೆಯೇ ಕೋರ್ಟ್ ಮೆಟ್ಟಿಲೇರಿದ್ದರು. 10 ವರ್ಷದ ಹಿಂದೆಯೇ ಇವರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ‌ ನೀಡಿತ್ತು. 10 ವರ್ಷ ಕಳೆದರೂ ಪರಿಹಾರ ನೀಡದ ಹಿನ್ನಲೆಯಲ್ಲಿ ಇದೀಗ ಮೈಸೂರು ಸಿಜೆಎಂ ನ್ಯಾಯಾಲಯ ‌ ಜಪ್ತಿಗೆ ಆದೇಶ ನೀಡಿದೆ.

ಕೋರ್ಟ್ ಅಧಿಕಾರಿ ಅಮಿನ್ ಜೊತೆ ಜಮೀನು ಮಾಲೀಕರು, ರೈತರು ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿದ್ದಾರೆ.  ಡಿಸಿ ಮತ್ತು  ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ   ಅಧಿಕಾರಿಗಳು ಮುಂದಾಗಿದ್ದು, ಎಸಿ ಡಾ.ವೆಂಕಟರಾಜು ಒಂದು ವಾರದ ಕಾಲ ಗಡುವು ಕೇಳಿದ್ದಾರೆ. ಕೋರ್ಟ್ ಆದೇಶ ಪಾಲಿಸುವಂತೆ ಎಸಿಗೆ ಕೋರ್ಟ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಎಸಿ ಡಾ.ವೆಂಕಟರಾಜು ಮನವಿಗೆ ಸ್ಪಂದಿಸಿದ ಕೋರ್ಟ್ ಅಧಿಕಾರಿಗಳು ಯಾವುದೆ ಪೀಠೋಪಕರಣಗಳನ್ನು ಜಪ್ತಿ ಮಾಡದೆ ಹೊರಟು ಹೋಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: