ಮನರಂಜನೆ

ಪುನೀತ್ ರಾಜ್ ಕುಮಾರ್ ಗೆ ‘ಕಲಾ ಸಾರ್ವಭೌಮ’ ಬಿರುದು

ಬೆಂಗಳೂರು,ನ.21-ಪವರ್ ಸ್ಟಾರ್ ಪುನೀರ್ ರಾಜ್ ಕುಮಾರ್ ಗೆ ಹೊಸದೊಂದು ಬಿರುದು ನೀಡಲಾಗಿದೆ. ಕತಾರ್ ನಲ್ಲಿ ಪುನೀತ್ ಗೆ ಹೊಸದೊಂದು ಬಿರುದು ನೀಡಿ ಗೌರವಿಸಲಾಗಿದೆ.

ದುಬೈ ದೇಶದ ಕತಾರ್ ನಲ್ಲಿ `ಕರ್ನಾಟಕ ಸಂಘ ಕತಾರ್’ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ರಿಗೆ ‘ಕಲಾ ಸಾರ್ವಭೌಮ’ ಎಂದು ಹೊಸ ಬಿರುದು ನೀಡಲಾಗಿದೆ.

ಡಾ.ರಾಜ್ ಕುಮಾರ್ ನಟ ಸಾರ್ವಭೌಮ, ಶಿವರಾಜ್ ಕುಮಾರ್ ನಾಟ್ಯ ಸಾರ್ವಭೌಮ ಎಂದು ಹೆಸರು ಪಡೆದಿದ್ದು, ಇದೀಗ ಅಪ್ಪು ‘ಕಲಾ ಸಾರ್ವಭೌಮ’ ಆಗಿದ್ದಾರೆ.

ಕಾರ್ಯಕ್ರಮದಲ್ಲಿ ಮಿಸ್ಟರ್ ಪರ್ಫೆಕ್ಟ್ ಹಾಡಿಗೆ ಕುಣಿದು ಅಲ್ಲಿದ್ದವರೆಲ್ಲರನ್ನೂ ರಂಜಿಸಿದ್ದಾರೆ.ಪುನೀತ್ ರಾಜ್‌ಕುಮಾರ್ ನಿರ್ಮಾಣದ ‘ಮಾಯಾ ಬಜಾರ್’ ಸಿನಿಮಾದ ಟೀಸರ್‌ ಕತಾರ್‌ನಲ್ಲಿ ರಿಲೀಸ್‌ ಆಗಿತ್ತು. ಅಲ್ಲಿದ್ದವರೆಲ್ಲರೂ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ರಾಜ್ ಬಿ. ಶೆಟ್ಟಿ ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ, ವಸಿಷ್ಠ ಸಿಂಹ ಕೂಡ ಮಹತ್ವದ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಮುಖ್ಯ ಅತಿಥಿ ಆಗಿದ್ದರು. ಅವರ ಪತ್ನಿ ಅಶ್ವಿನಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಾದ್ಯಗೋಷ್ಠಿಯ ಮೆರವಣಿಗೆ ಮೂಲಕ ಸಮಾರಂಭಕ್ಕೆ ಅವರನ್ನು ಕರೆತಂದು ಸನ್ಮಾನಿಸಿದ್ದು, ಪ್ರಮುಖ ಆಕರ್ಷಣೆ ಆಗಿತ್ತು. ಇದೇ ಕಾರ್ಯಕ್ರಮದಲ್ಲಿ ಎಸ್.ಎಲ್.ಭೈರಪ್ಪ ಅವರಿಗೆ ಕತಾರ್ ಕನ್ನಡ ಸನ್ಮಾನ್ ಪ್ರಶಸ್ತಿ ನೀಡಲಾಯಿತು. (ಎಂ.ಎನ್)

Leave a Reply

comments

Related Articles

error: