ಕ್ರೀಡೆ

ವಿಂಡೀಸ್ ವಿರುದ್ಧದ ಟಿ-20 ಸರಣಿ ಕ್ಲೀನ್‌ ಸ್ವೀಪ್‌ ಗೈದ ಭಾರತೀಯ ವನಿತೆಯರು

ಗಯಾನ,ನ.21-ವೆಸ್ಟ್ಇಂಡೀಸ್ ವಿರುದ್ಧ ನಡೆದ ಐದನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ಭಾರತೀಯ ವನಿತೆಯರ ಪಡೆ 61 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು 5-0 ಅಂತರದಲ್ಲಿ ಕ್ಲೀನ್ಸ್ವೀಪ್ಗೈದಿದೆ.

ಗಯಾನದ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ ಜೆಮಿಮಾ ರೊಡ್ರಿಗಸ್ (50), ವೇದಾ ಕೃಷ್ಣಮೂರ್ತಿ (57*) ಅವರ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 134 ರನ್ ಪೇರಿಸಿತ್ತು.

135 ರನ್ ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಭಾರತೀಯ ಆಟಗಾರ್ತಿಯರ ನಿಖರ ದಾಳಿಗೆ ಸಿಲುಕಿ ಏಳು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಲಷ್ಟೇ ಶಕ್ತವಾಯಿತ್ತು. ಆರಂಭಿಕ ಆಟಗಾರ್ತಿ ಕೀಶೋನಾ ನೈಟ್ (22) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ವುಮೆನ್ ಶೆಮೈನ್ ಚಾಂಪ್ಬೆಲ್ (19*) ಎರಡಂಕಿಯನ್ನು ತಲುಪಿರುವುದನ್ನು ಬಿಟ್ಟರೆ ಇತರೆಲ್ಲ ಆಟಗಾರ್ತಿಯರು ವೈಫಲ್ಯವನ್ನು ಅನುಭವಿಸಿದರು.

ಭಾರತದ ಪರ ನಿಖರ ದಾಳಿ ಸಂಘಟಿಸಿದ ಅನುಜ ಪಟೇಲ್ ಮೂರು ಓವರ್ಗಳಲ್ಲಿ ಕೇವಲ ಮೂರು ರನ್ ಮಾತ್ರ ಬಿಟ್ಟುಕೊಟ್ಟು ಎರಡು ವಿಕೆಟ್ ಕಿತ್ತು ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸಹ ಸೇರಿತ್ತು.

ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (9), ಸ್ಮೃತಿ ಮಂಧಾನಾ (7) ವಿಕೆಟ್ಗಳು 17 ರನ್ಗಳಿಸುವಷ್ಟರಲ್ಲಿ ನಷ್ಟವಾಗಿದ್ದವು. ಹಂತದಲ್ಲಿ ಜತೆಗೂಡಿದ ಜೆಮಿಮಾ ಹಾಗೂ ವೇದಾ ಮೂರನೇ ವಿಕೆಟ್ಗೆ 117 ರನ್ಗಳ ಅಮೂಲ್ಯ ಜತೆಯಾಟ ನೀಡುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. 56 ಎಸೆತಗಳನ್ನು ಎದುರಿಸಿದ ಜೆಮಿಮಾ ಮೂರು ಬೌಂಡರಿಗಳಿಂದ 50 ರನ್ ಗಳಿಸಿದರು. ಇನ್ನೊಂದೆಡೆ 48 ಎಸೆತಗಳನ್ನು ಎದುರಿಸಿದ ವೇದಾ ನಾಲ್ಕು ಬೌಂಡರಿಗಳಿಂದ 57 ರನ್ ಗಳಿಸಿ ಅಜೇಯರಾಗುಳಿದರು.

ಟಿ-20 ಸರಣಿಗೂ ಮುನ್ನ ನಡೆದ ಏಕದಿನ ಸರಣಿಯಲ್ಲೂ ಭಾರತೀಯ ಮಹಿಳಾ ಪಡೆ 2-1 ಅಂತರದ ಗೆಲುವು ಸಾಧಿಸಿತ್ತು. (ಎಂ.ಎನ್)

Leave a Reply

comments

Related Articles

error: