ಕ್ರೀಡೆ

ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್: ಎಲವೆನಿಲ್ ವಲರಿವನಗೆ ಸ್ವರ್ಣ

ಪುಟಿಯಾನ(ಚೀನಾ),ನ.21-ಅಂತಾರಾಷ್ಟ್ರೀಯ ಏರ್ ರೈಫಲ್ ವಿಶ್ವಕಪ್ ಫೈನಲ್ ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣಪದಕ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ನಲ್ಲಿ ಎಲವೆನಿಲ್ ವಲರಿವನ ಚಿನ್ನದ ಪದಕ ಜಯಿಸಿದ್ದಾರೆ.

ಎಲವೆನಿಲ್ ವಲರಿವನ 250.8 ಪಾಯಿಂಟ್ ಗಳೊಂದಿಗೆ ತೈವಾನ್ ನ ಲಿನ್ ಯಿಂಗ್ -ಶಿನ್ (250.7) ಅವರನ್ನು ಸೋಲಿಸಿದ್ದಾರೆ.

ರೊಮಾನಿಯಾದ ಲೌರಾ-ಜಾರ್ಜೆಟಾ ಕೊಮನ್ 229 ಪಾಯಿಂಟ್ ಗಳೊಂದಿಗೆ ಮೂರನೇ ಸ್ಥಾನಗಳಿಸಿದ್ದಾರೆ. ಇದೇ ವಿಭಾಗದಲ್ಲಿ ಭಾರತದ ಮೆಹುಲಿ ಘೋಷ್ ಅಂತಿಮ ಸುತ್ತು ಪ್ರವೇಶಿಸಿದ್ದರು. ಆದರೆ ಕೊನೆಯಲ್ಲಿ 163.8 ಪಾಯಿಂಟ್ ಗಳೊಂದಿಗೆ 6ನೆಯವರಾಗಿ ಹೊರಹೊಮ್ಮಿದರು.

ಪುರುಷರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಅಭಿಷೇಕ್ ವರ್ಮ ಮತ್ತು ಸೌರಭ್ ಚೌಧರಿ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.  (ಎಂ.ಎನ್)

Leave a Reply

comments

Related Articles

error: