ಪ್ರಮುಖ ಸುದ್ದಿ

ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಗೆ ಕಡಿದ ಹಾವು; ಹಾವು ಕಡಿದಿದೆ ಎಂದರೂ ನಿರ್ಲಕ್ಷ್ಯ ತೋರಿದ ಶಿಕ್ಷಕಿ ; ಬಾಲಕಿ ಸಾವು

ದೇಶ(ಕೇರಳ)ನ.22:-   ಶಾಲಾ ಕೊಠಡಿಯೊಳಗೆ ಹಾವು ಕಡಿದ ಪರಿಣಾಮ 10 ವರ್ಷದ ಬಾಲಕಿಯೋರ್ವಳು ಮೃತಪಟ್ಟ ಘಟನೆ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಐದನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ  ಶೆಹ್ಲಾ ಶೆರಿನ್ ಎಂದು ಹೇಳಲಾಗಿದ್ದು,  ಘಟನೆ ನಡೆದು ಒಂದು ಗಂಟೆಯ ನಂತರ  ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು   ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಷ್ಟೊತ್ತಿಗಾಗಲೇ ಹುಡುಗಿಯ ಕಾಲು ನೀಲಿ ಬಣ್ಣಕ್ಕೆ ತಿರುಗಿದೆ ಎಂದು ಅವರು ಆರೋಪಿಸಿದ್ದಾರೆ.

ಹಾವು ಕಡಿದ ಕೂಡಲೇ ಬಾಲಕಿ ಶಿಕ್ಷಕಿಗೆ ಹೇಳಿದ್ದು, ಆದರೆ  ಅದನ್ನೊಪ್ಪದ ಶಿಕ್ಷಕಿ ಉಗುರು ತಾಗಿ ಗಾಯವಾಗಿರಬೇಕೆಂದು ನಿರ್ಲಕ್ಷ್ಯ ತೋರಿದ್ದಾಳೆ.  ಇದಾದ ಕೆಲವೇ ನಿಮಿಷಗಳಲ್ಲಿ ಬಾಲಕಿಯ ಕಾಲು ಊದಿಕೊಂಡು ನೀಲಿ ಆಗಿದ್ದರೂ ಆಸ್ಪತ್ರೆಗೆ ದಾಖಲಿಸುವ ಬದಲು ಶಿಕ್ಷಕಿ ತರಗತಿ ಮುಂದುವರೆಸಿದ್ದಾರೆ.  ಅಷ್ಟೇ ಅಲ್ಲ  ಬಾಲಕಿಯನ್ನು ತರಗತಿಯ ಹೊರಗೆ 45 ನಿಮಿಷಗಳ ಕಾಲ ಕಾಯಿಸಿದ್ದಾರೆ. ಶಾಲಾ ಸಿಬ್ಬಂದಿಯ ಬಳಿ ಬೈಕ್ ಇದ್ದರೂ ಯಾರೂ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿರಲಿಲ್ಲ.

ಕೊನೆಗೆ ಬಾಲಕಿಯ ತಂದೆಯೇ ಬಂದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದಿದ್ದಾಗ ಬಾಲಕಿಯನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿಗೆ ದಾಖಲಿಸುವ ವೇಳೆ ಬಾಲಕಿ ಸಾವಿಗೀಡಾಗಿದ್ದಾಳೆ.

ಇದೇ ವೇಳೆ ಘಟನೆಗೆ ಬಾಲಕಿಯ ಸಂಬಂಧಿಗಳು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯನ್ನು ಶಾಲೆಗೆ ಭೇಟಿ ನೀಡುವಂತೆ ಕೋರಲಾಗಿದ್ದು, ಶಾಲೆಗೆ ಬಂದ ಉಪನಿರ್ದೇಶಕರು ತರಗತಿಯನ್ನು ಪರಿಶೀಲಿಸಿದರು. ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಈ ಕುರಿತು ವರದಿ ಕೋರಿದ್ದಾರೆ.

ಏತನ್ಮಧ್ಯೆ, ಕೋಪಗೊಂಡ ಸ್ಥಳೀಯ ಜನರು ಮತ್ತು ಸಂಬಂಧಿಕರು ಸಿಬ್ಬಂದಿ ಕೋಣೆಗೆ ನುಗ್ಗಿ ಹಾಜರಿದ್ದ ಶಿಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿದರು, ಆದರೆ ಶಾಲೆಯಲ್ಲಿ ಬಿಗಿಯಾದ ವಾತಾವರಣವಿದ್ದ ಕಾರಣ ಪೊಲೀಸರ ಬಿಗಿ ಭದ್ರತೆಯಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಡಳಿತ ಮಂಡಳಿ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಸ್ತುತ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. (ಎಸ್.ಎಚ್)

Leave a Reply

comments

Related Articles

error: