ಕ್ರೀಡೆಮೈಸೂರು

ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ: ಮೈಸೂರಿನಿಂದ ನಾಲ್ವರು ಆಟಗಾರರು ಭಾಗಿ

ಮೈಸೂರು,ನ.22-ಕೇಂದ್ರ ಕ್ರೀಡಾ ಮತ್ತು ಯುವಜನ ಇಲಾಖೆ ವತಿಯಿಂದ ಜನವರಿಯಲ್ಲಿ ಅರಬ್ಬಿ ಸಮುದ್ರದ ಕರಾವಳಿ ತೀರ ಪ್ರದೇಶವಾದ ದಮನ್ ಮತ್ತು ಡಿಯುನಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ರಾಷ್ಟ್ರಮಟ್ಟದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಮೈಸೂರಿನ ನಾಲ್ವರು ಆಟಗಾರರು ಭಾಗವಹಿಸಲಿದ್ದಾರೆ.

ಯದುನಂದನ್, ಯಶವಂತ್

ಐಡಿಯಲ್ ಜಾವಾ ರೋಟರಿ ಶಾಲೆಯ ಎಚ್.ಎನ್.ಪವನ್, ಮರಿಮಲ್ಲಪ್ಪ ಪ್ರೌಢಶಾಲೆಯ ಲಿಖಿತ್ ಎಸ್.ಗೌಡ, ಗೀತಾ ಶಿಶು ಶಿಕ್ಷಣ ಸಂಸ್ಥೆ ಪ್ರೌಢಶಾಲೆಯ ಯದುನಂದನ್, ವಿಜಯ ವಿಠಲ ಪ್ರೌಢಶಾಲೆಯ ಯಶವಂತ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಜನವರಿ 3 ರಿಂದ 8 ರವರೆಗೆ ಟೂರ್ನಿ ನಡೆಯಲಿದ್ದು, ಕರ್ನಾಟಕ ತಂಡದಿಂದ ಮೈಸೂರಿನ ನಾಲ್ವರು ಆಟಗಾರರು ರಾಷ್ಟ್ರಮಟ್ಟದ ಟೂರ್ನಿಗಾಗಿ ಆಯ್ಕೆಯಾಗಿದ್ದಾರೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: