ಮೈಸೂರು

ಸಾಲಕ್ಕಾಗಿಯೇ ಬ್ಯಾಂಕುಗಳನ್ನು ಬಳಕೆ ಮಾಡಿಕೊಳ್ಳಬೇಡಿ

 ಬ್ಯಾಂಕುಗಳನ್ನು ಕೇವಲ ಸಾಲಕ್ಕಾಗಿಯೇ ಬಳಸಿಕೊಳ್ಳದೇ ಹಣ ಉಳಿತಾಯಕ್ಕೂ ಬಳಸಿಕೊಳ್ಳಬೇಕು. ಇದರಿಂದ ನಿಮಗೂ ಉಪಯೋಗವಾಗುತ್ತದೆ ಎಂದು ಪಂಚವಳ್ಳಿ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ಎಸ್.ಪಿ. ಭಾರ್ಗವರವರು ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಾರ್ವಜನಿಕರು ಕೇವಲ ಸಾಲ ಪಡೆಯುವಾಗ ಮಾತ್ರ ಬ್ಯಾಂಕುಗಳಿಗೆ ಪದೇ ಪದೇ ಬರುತ್ತಾರೆ. ಕೆಲವರು ಸಾಲ ತೆಗೆದುಕೊಂಡ ನಂತರ ಬ್ಯಾಂಕಿನ ಕಡೆ ಬರುವುದಿಲ್ಲ. ಹಾಗಾಗಿ ಸಾಲವನ್ನು ಸರಿಯಾಗಿ ಕಟ್ಟುವುದರ ಜೊತೆಗೆ ಬ್ಯಾಂಕಿನಲ್ಲಿ ಹಣ ಇಡುವುದಕ್ಕೂ ಮುಂದಾಗಬೇಕು. ಇದರಿಂದ ಬ್ಯಾಂಕಿಂಗ್‍ ಕ್ಷಮತೆ ಹೆಚ್ಚುತ್ತದೆ. ಹೆಚ್ಚಾಗಿ ಸಾಲ ತೆಗೆದುಕೊಂಡು ತೊಂದರೆ ಅನುಭವಿಸುದಕ್ಕಿಂತ ಅಗತ್ಯವಿರುಷ್ಟು ಮಾತ್ರ ತೆಗೆದುಕೊಳ್ಳಬೇಕು ಎಂದರು.

ಕೇಂದ್ರ ಸರ್ಕಾರ ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ 12 ಮತ್ತು 330 ರೂಪಾಯಿಗಿಂತ ಕಡಿಮೆ ದರದ ಇನ್ಶುರೆನ್ಸ್ ಕೂಡ ತುಂಬಾ ಉಪಯೋಗವಾಗುವ ಯೋಜನೆಯಾಗಿದೆ. ಅಟಲ್ ಪೆನ್ಶನ್ ಯೋಜನೆಯಂತವುಗಳನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಂತರ ಮಾತನಾಡಿದ ಮೈಮುಲ್ ನಿರ್ದೇಶಕ ಪ್ರಸನ್ನ ಅವರು, ರೈತರು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಲು ಕೆಎಂಎಫ್‌ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳಬೇಕು. ಉತ್ತಮ ಹಾಲು ಸರಬರಾಜು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಮುಲ್ ನಿರ್ದೇಶಕ ಪ್ರಸನ್ನ, ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಎಸ್.ಪಿ ಭಾರ್ಗವ, ಇಂಡಿಯನ್ ಓವರ್‍ಸೀಸ್‍ ಬ್ಯಾಂಕ್‌ನ ಸಿಬ್ಬಂದಿ ಮುತ್ತಿನ್, ಎಂಪಿಸಿಎಸ್‌ ಅಧ್ಯಕ್ಷ ಕಾಳೇಗೌಡರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾರ್ಯದರ್ಶಿ ಈಶ್ವರ ಹಾಗೂ ನಿರ್ದೇಶಕ, ಸದ್ಯಸರು ಮತ್ತು ಗ್ರಾಮಸ್ಥರು ಹಾಜರಿದರು.

 

ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕಿನ ಶಾಖಾ ವ್ಯವಸ್ಥಾಪಕರಾದ ಎಸ್.ಪಿ. ಭಾರ್ಗವ ರವರು ಮಾತನಾಡಿದರು.

Leave a Reply

comments

Tags

Related Articles

error: