
ಮೈಸೂರು
ಸಿಎಫ್ ಟಿಐಆರ್ ನಲ್ಲಿ ಉದ್ಯಮಶೀಲರ ಸಭೆ
ಮೈಸೂರಿನ ಸಿಎಫ್ಟಿಆರ್ಐ ಸಂಶೋಧನೆ ಹಾಗೂ ತಂತ್ರಜ್ಞಾನವನ್ನು ಹೊಸ ಉದ್ಯಮಶೀಲರಿಗಾಗಿ ಪರಿಚಯಿಸುವ ನಿಟ್ಟಿನಲ್ಲಿ ಸಂಸ್ಥೆಯ ಆವರಣದಲ್ಲಿ ಉದ್ಯಮಶೀಲರ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಹಪ್ಪಳ ತಯಾರಿಕೆ ಸಾಧನ ಹಾಗೂ ಅಕ್ಕಿ ಹಾಲು ಮಿಕ್ಸ್ಗಳನ್ನು ನಿರ್ದೇಶಕ ಪ್ರೊ. ರಾಮ್ ರಾಜಶೇಖರನ್ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಬೇಕರಿ ಉತ್ಪನ್ನಗಳು, ಇಡ್ಲಿ, ಸಿರಿಧಾನ್ಯ, ಹಣ್ಣು, ತರಕಾರಿಗಳ ಕುರಿತು ಚರ್ಚೆ ನಡೆಯಿತು.
ಆಹಾರ ಪ್ಯಾಕಿಂಗ್ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ರಾಜೇಶ್ ಎಸ್. ಮ್ಯಾಶೆ, ಬಿ.ವಿ. ಸತ್ಯೇಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು.