ಮೈಸೂರು

ಸೂಯೆಜ್ ಫಾರಂ ತ್ಯಾಜ್ಯ ಘಟಕಕ್ಕೆ ರೋಷನ್ ಬೇಗ್ ಭೇಟಿ

ರಾಜ್ಯ ನಗರಾಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಅವರು ಗುರುವಾರ ಸೂಯೆಜ್ ಫಾರಂ ಬಳಿ ಇರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ಘಟಕದ ಮೇಲೆ ಹೆಚ್ಚಿನ ಒತ್ತಡ ಆಗುತ್ತಿರುವ ಹಿನ್ನೆಲೆಯಲ್ಲಿ ಕೆಸರೆ ಮತ್ತು ರಾಯನಕೆರೆ ಬಳಿ ಇನ್ನೆರಡು ಘಟಕಕ್ಕೆ ಮಂಜೂರಾತಿ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಈ ಸಂದರ್ಭ ಶಾಸಕ ಎಂ.ಕೆ.ಸೋಮಶೇಖರ್, ಮೈಲಾಕ್ ಅಧ್ಯಕ್ಷ  ಹೆಚ್.ಎ.ವೆಂಕಟೇಶ್ ಮತ್ತಿತರರು ಸಚಿವರ ಜೊತೆಗಿದ್ದರು.

Leave a Reply

comments

Related Articles

error: