ದೇಶಪ್ರಮುಖ ಸುದ್ದಿ

ದೇವೇಂದ್ರ ಫಡ್ನವಿಸ್ ಸರ್ಕಾರಕ್ಕಿಲ್ಲ ಶರದ್ ಪವಾರ್ ಬೆಂಬಲ

ಮುಂಬೈ,ನ.23-ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಬಿಜೆಪಿಎನ್ಸಿಪಿ ಸರ್ಕಾರ ರಚನೆಯಾಗಿದೆ. ಸಿಎಂ ಆಗಿ ದೇವೇಂದ್ರ ಫಡ್ನವಿಸ್, ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಿಜೆಪಿಎನ್ಸಿಪಿ ಸರ್ಕಾರ ರಚನೆಗೆ ಎನ್ ಸಿಪಿ ನಾಯಕ ಶರದ್ ಪವಾರ್ ಒಪ್ಪಿಗೆ ನೀಡಿದ್ದಾರಾ ಎಂಬ ಮಾತುಗಳು ಮಹಾರಾಷ್ಟ್ರದಲ್ಲಿ ಕೇಳಿ ಬರುತ್ತಿದೆ. ಎನ್ ಸಿಪಿ ನಾಯಕ ಶರದ್ ಪವಾರ್ ಅವರಿಗೆ ಗೊತ್ತಿಲ್ಲದೆ ಅಜಿತ್ ಪವಾರ್ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ಎಂದು ಹೇಳಲಾಗುತ್ತಿದೆ.

ಅಲ್ಲದೆ, ಶರದ್ಪವಾರ್ ಸರ್ಕಾರಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಸ್ವತಃ ಎನ್ಸಿಪಿ ಅಧ್ಯಕ್ಷ ಟ್ವೀಟ್ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೂಲಕ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ತಮ್ಮ ಬೆಂಬಲವಿಲ್ಲ ಎಂಬುದನ್ನು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್, ಬಿಜೆಪಿಗೆ ಬೆಂಬಲ ನೀಡಿ ಸರ್ಕಾರ ರಚಿಸಿದ್ದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರವೇ ಹೊರತು ಎನ್ ಸಿಪಿದಲ್ಲ. ನಾವು ನಿರ್ಧಾರವನ್ನು ಬೆಂಬಲಿಸುವುದಿಲ್ಲ ಮತ್ತು ಅನುಮೋದಿಸುವುದೂ ಇಲ್ಲ ಎಂದಿದ್ದಾರೆ.

ಮತ್ತೊಂದೆಡೆ ದೇವೇಂದ್ರ ಫಡ್ನವಿಸ್ನೇತೃತ್ವದ ಸರ್ಕಾರ ರಚನೆಗೆ ಶರದ್ ಪವಾರ್ ಒಪ್ಪಿಗೆ ಇದೆ ಎಂದು ಮೂಲಗಳು ಮಾಹಿತಿ ನೀಡಿರುವ ಬಗ್ಗೆ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ. ಅಜಿತ್ಪವಾರ್ಎನ್ಸಿಪಿ ಶಾಸಕಾಂಗ ನಾಯಕರಾಗಿದ್ದು, ಶರದ್ಪವಾರ್ಒಪ್ಪಿಗೆ ಇಲ್ಲದೆ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದೂ ಮೂಲಗಳು ತಿಳಿಸಿದೆ ಎಂದು ಹೇಳಿದೆ.

ಎನ್ಸಿಪಿಯ 54 ಶಾಸಕರ ಪೈಕಿ 22 ಮಂದಿ ಬಿಜೆಪಿ ಸರ್ಕಾರದ ಜತೆಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕೀಯ ಮತ್ತೊಂದು ಮಹಾ ಅಚ್ಚರಿಗೆ ಕಾರಣವಾಗಿರುವುದಂತೂ ಸತ್ಯ.

ಶಿವಸೇನೆಕಾಂಗ್ರೆಸ್ಜತೆ ಸೇರಿ ಸರ್ಕಾರ ರಚನೆಗೆ ಶರದ್ಪವಾರ್ ಮುಂದಾಗಿದ್ದರು. ಶಿವಸೇನೆ ನೇತೃತ್ವದ ಸರ್ಕಾರ ರಚನೆಗೆ ಕಾಂಗ್ರೆಸ್ಹಾಗೂ ಎನ್ಸಿಪಿ ಎರಡೂ ಪಕ್ಷಗಳು ಒಪ್ಪಿಗೆ ಸೂಚಿಸಿವೆ ಎನ್ನಲಾಗಿತ್ತು. ಇನ್ನೇನು ಶಿವಸೇನೆ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಉದ್ಧವ್ಠಾಕ್ರೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಇದಕ್ಕೆ ಎನ್ಸಿಪಿ ಅಧ್ಯಕ್ಷ ಶರದ್ಪವಾರ್ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸಿದ್ದಾರೆ ಎಂದೂ ತಿಳಿದುಬಂದಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಎನ್ಸಿಪಿ ಸರ್ಕಾರ ರಚನೆಯಾಗಿದೆ. (ಎಂ.ಎನ್)

 

Leave a Reply

comments

Related Articles

error: