ಕ್ರೀಡೆ

5 ಸಾವಿರ ರನ್ ಗಳ ಮೈಲುಗಲ್ಲು ತಲುಪಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಕೋಲ್ಕತ್ತಾ,ನ.23-ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಐತಿಹಾಸಿಕ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 5000 ರನ್ಗಳ ಮೈಲುಗಲ್ಲು ತಲುಪುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕೊಹ್ಲಿ 53ನೇ ಟೆಸ್ಟ್ಪಂದ್ಯದ 86ನೇ ಇನಿಂಗ್ಸ್ನಲ್ಲಿ ಟೆಸ್ಟ್ತಂಡದ ನಾಯಕನಾಗಿ ಅತ್ಯಂತ ವೇಗವಾಗಿ 5 ಸಾವಿರ ರನ್ಗಳನ್ನು ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.

ವಿರಾಟ್ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಜೀವದಾನ ಪಡೆದುಕೊಂಡರು. ಕೊಹ್ಲಿ ಬ್ಯಾಟ್ ಅಂಚಿಗೆ ತಾಗಿದ ಚೆಂಡು ಸ್ಲಿಪ್ಫೀಲ್ಡರ್ಮೇಲೆ ಹಾರಿ ಹೋಗಿತ್ತು. ಬಳಿಕ ಎಚ್ಚರಿಕೆಯ ಬ್ಯಾಟಿಂಗ್ನಡೆಸಿದರು. ಚೇತೇಶ್ವರ್ಪೂಜಾರ ಜೊತೆಗೂಡಿದ ಕೊಹ್ಲಿ 3ನೇ ವಿಕೆಟ್ಗೆ ಆರ್ಧಶತಕದ ಜೊತೆಯಾಟವಾಡಿದರು.

ಅನುಭವಿ ಬ್ಯಾಟ್ಸ್ಮನ್ಚೇತೇಶ್ವರ್ಪೂಜಾರ ಕೂಡ ಪ್ರಥಮದರ್ಜೆ ಕ್ರಿಕೆಟ್ನಲ್ಲಿ 15 ಸಾವಿರ ರನ್ಗಳ ಗಡಿ ದಾಟಿದರು. ಇದಕ್ಕೂ ಮುನ್ನ ಬಾಂಗ್ಲಾ ತಂಡದ ಅಂತಿಮ ವಿಕೆಟ್ಪತನಕ್ಕೆ ಕಾರಣರಾದ ಪೂಜಾರ ಟೆಸ್ಟ್ಕ್ರಿಕೆಟ್ನಲ್ಲಿ 50 ಕ್ಯಾಚ್ಗಳನ್ನು ಪಡೆದ ಸಾಧನೆಯನ್ನೂ ಮಾಡಿದರು.

ಮೊಹಮ್ಮದ್ಶಮಿ ಬೌಲಿಂಗ್ನಲ್ಲಿ ಬಾಂಗ್ಲಾ ತಂಡದ ಬ್ಯಾಟ್ಸ್ಮನ್ಅಬು ಜಾಯೇದ್ಚೆಂಡನ್ನು ಎಡ್ಜ್ಮಾಡಿದ್ದು, ಅತ್ಯಂತ ವೇಗವಾಗಿ ಹಾರಿಬಂದ ಚೆಂಡನದ್ನು ಹಿಡಿಯುವಲ್ಲಿ 2ನೇ ಸ್ಲಿಪ್ನಲ್ಲಿ ರೂಹಿತ್ವಿಫಲರಾಗಿ ಚೆಂಡನ್ನು ಮೇಲಕ್ಕೆ ದೂಡಿದ್ದರು. ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ ಚೇತೇಶ್ವರ್ಪೂಜಾರ ಚೆಂಡನ್ನು ಹಿಡಿಯವ ಮೂಲಕ ಟೆಸ್ಟ್ಕ್ರಿಕೆಟ್ನಲ್ಲಿ ತಮ್ಮ 50ನೇ ಕ್ಯಾಚ್ಪೂರೈಸಿದರು.

ಚೊಚ್ಚಲ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ ತಂಡ ಮೊದಲ ಇನಿಂಗ್ಸ್ನಲ್ಲಿ 106 ರನ್ಗಳಿಗೆ ಆಲ್ಔಟ್ಆಗಿದೆ. ಇದು ಟೆಸ್ಟ್ಕ್ರಿಕೆಟ್ನಲ್ಲಿ ಬಾಂಗ್ಲಾದೇಶ ತಂಡ ಭಾರತ ವಿರುದ್ಧ ದಾಖಲಿಸಿದ 2ನೇ ಅತ್ಯಲ್ಪ ಮೊತ್ತವಾಗಿದೆ.

ಭಾರತದ ಮೊತ್ತ ಮೊದಲ ಪಿಂಕ್ಬಾಲ್ಟೆಸ್ಟ್ಪಂದ್ಯದಲ್ಲಿ ಭಾರತಕ್ಕೆ ಮೊದಲ ವಿಕೆಟ್ತಂದುಕೊಟ್ಟ ಅನುಭವಿ ವೇಗದ ಬೌಲರ್ಇಶಾಂತ್ಶರ್ಮಾ, ಅಂತಿಮವಾಗಿ 22 ರನ್ಗೆ 5 ವಿಕೆಟ್ಉರುಳಿಸಿ ಅಬ್ಬರಿಸಿದರು. ಅಂದಹಾಗೆ ಟೀಮ್ಇಂಡಿಯಾ ಪರ ತವರು ನೆಲದಲ್ಲಿ ಇಶಾಂತ್‌ 5 ವಿಕೆಟ್ಸಾಧನೆ ಮಾಡಿರುವುದು ಬರೋಬ್ಬರಿ 12 ವರ್ಷಗಳ ಬಳಿಕ ಎಂದರೆ ಅಚ್ಚರಿಯಾಗಬಹುದು. 2007ರಲ್ಲಿ ಬೆಂಗಳೂರಿನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ಪಂದ್ಯದಲ್ಲಿ ಇಶಾಂತ್ಕೊನೆಯ ಬಾರಿ ತಾಯ್ನಾಡಿನಲ್ಲಿ 5 ವಿಕೆಟ್ಸಾಧನೆ ಮಾಡಿದ್ದರು. ಆಗ ಅವರಿಗೆ ಕೇವಲ 19 ವರ್ಷ. ಇದೀಗ ತಮ್ಮ ವೃತ್ತಿ ಬದುಕಿನ 96ನೇ ಟೆಸ್ಟ್ಪಂದ್ಯವನ್ನಾಡುತ್ತಿದ್ದಾರೆ.

ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 46 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ. ವಿರಾಟ್ ಕೊಹ್ಲಿ 59, ಅಜಿಂಕ್ಯಾ ರಹಾನೆ 23 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: