ಮನರಂಜನೆ

ಡಬ್ಬಿಂಗ್ ವಿರುದ್ಧ ಮಾ.11ರಂದು ಸ್ಯಾಂಡಲ್‍ವುಡ್‍ನಿಂದ ಬೃಹತ್ ಪ್ರತಿಭಟನೆ

ಕನ್ನಡ ಚಿತ್ರೋದ್ಯಮಕ್ಕೆ ಮತ್ತೊಮ್ಮೆ ಡಬ್ಬಿಂಗ್ ಭೂತ ಕಾಡಲು ಶುರುವಾಗಿದ್ದು, ಇಡೀ ಸ್ಯಾಂಡಲ್‍’ವುಡ್ ಒಕ್ಕೊರಲಿನಿಂದ ಡಬ್ಬಿಂಗ್ ಖಂಡಿಸಿ ಮಾ.11ರಂದು ಚಿತ್ರೋದ್ಯಮ ಬಂದ್‍ಗೆ ಕರೆ ನೀಡಿದೆ. ಅಂದು ಇಡೀ ಚಿತ್ರೋದ್ಯಮವೇ ತನ್ನ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.

ಚಿತ್ರೋದ್ಯಮ ಬಂದ್‍ಗೆ ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಬೆಂಬಲ ವ್ಯಕ್ತಪಡಿಸಿ ತಮ್ಮ ವಾಟಾಳ್ ಪಕ್ಷದಿಂದ ಕಲಾವಿದರ ಬೆಂಬಲಕ್ಕೆ ನಿಲ್ಲುವುದಾಗಿ ತಿಳಿಸಿದ್ದಾರೆ.

ಕಾನೂನಿನ ತೊಡಕಿನ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಮಂಡಳಿ ಬಂದ್‍ನಿಂದ ದೂರ ಉಳಿದು ಬಾಹ್ಯ ಬೆಂಬಲ ನೀಡುತ್ತಿದೆ.

ಕನ್ನಡ ಚಿತ್ರೋದ್ಯಮದಲ್ಲಿ ಕಲಾವಿದರು, ತಂತ್ರಜ್ಞರು ಸೇರಿದಂತೆ 6 ಸಾವಿರಕ್ಕೂ ಅಧಿಕ ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು ಡಬ್ಬಿಂಗ್‍ನಿಂದಾಗಿ ಇವರೆಲ್ಲರ ಹೊಟ್ಟೆ ಮೇಲೆ ಹೊಡೆದಂತಾಗುವುದೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶಿವರಾಮ್, ನವರಸ ನಾಯಕ ಜಗ್ಗೇಶ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಸೇರಿದಂತೆ ಎಲ್ಲ ಹಿರಿಯ-ಕಿರಿಯ ಕಲಾವಿದರು ಡಬ್ಬಿಂಗ್ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುವ ನಿರ್ಣಯಕ್ಕೆ ಮುಂದಾಗಿದ್ದಾರೆ.

ಡಬ್ಬಿಂಗ್ ವಿರೋಧಿಸಿ ಹಮ್ಮಿಕೊಂಡಿರುವ ಚಳವಳಿಯನ್ನು ಯಶಸ್ವಿಗೊಳಿಸುವ ತಂತ್ರ ಸೇರಿದಂತೆ ಮುಂದಿನ ಹೋರಾಟದ ರೂಪರೇಷೆ ಲೆಕ್ಕಚಾರದಲ್ಲಿ ನಾಳೆ ಮಾ.4ರಂದು ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳು, ಚಲನಚಿತ್ರ ಗಣ್ಯರು, ನಿರ್ಮಾಪಕರು, ನಿರ್ದೆಶಕರು ಸೇರಿದಂತೆ ಹಲವಾರು ಹಿರಿಯ ಕಲಾವಿದರು ಸಭೆ ಸೇರಿ ಚರ್ಚೆ ನಡೆಸಲಿದ್ದಾರೆ.

Leave a Reply

comments

Related Articles

error: