
ಮೈಸೂರು
ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಬಹುಮಾನ
ಮೈಸೂರು,ನ.25:- ಸುತ್ತೂರು ನಂಜನಗೂಡಿನ ಸಿಟಿಜನ್ ಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುತ್ತೂರಿನ ಜೆಎಸ್ಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಬಹುಮಾನ ಹಾಗೂ ಉರ್ದು ಭಾಷಣ ಮತ್ತು ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ತಂಡವನ್ನು ಸಂಸ್ಥೆಯ ಸಂಯೋಜನಾಧಿಕಾರಿಗಳಾದ ಜಿ.ಎಲ್. ತ್ರಿಪುರಾಂತಕ, ಮುಖ್ಯೋಪಾಧ್ಯಾಯರಾದ ಜಿ.ಶಿವಮಲ್ಲು, ಸಿ.ಪಿ.ನಿರ್ಮಲ ಹಾಗೂ ನಾಗಲಕ್ಷ್ಮಿ , ಶಿಕ್ಷಕವೃಂದ ಅಭಿನಂದಿಸಿದೆ. (ಎಸ್.ಎಚ್)