ಮನರಂಜನೆ

ಜಾನ್ವಿ ಕಪೂರ್‍ ಮೇಲೆ ಬಾಲಿವುಡ್‍ ಕಣ್ಣು

ಮಾದಕ ಕಂಗಳ, ಮೋಹಕ ನಟಿ ಶ್ರೀದೇವಿ ಎಂದಾಕ್ಷಣ ನೆನಪಾಗುವುದು ಮಿಸ್ಟರ್ ಇಂಡಿಯಾದ ಮಾದಕ ನಟನೆ. ತನ್ನ ಸೌಂದರ್ಯ ಹಾಗೂ ಸಹಜಾಭಿನಯದಿಂದ ದಶಕಗಳ ಕಾಲ ಬಾಲಿವುಡ್‍ನಲ್ಲಿ ಮೆರೆದ ನಟಿ ಶ್ರೀದೇವಿ. ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಬೋನಿ ಕಪೂರ್ ವಿವಾಹವಾದ ನಂತರ ಚಿತ್ರರಂಗಕ್ಕೆ ವಿದಾಯ ಹೇಳಿದ್ದರಾದರೂ ಆಗೊಮ್ಮೆ ಈಗೊಮ್ಮೆ ತೆರೆ ಮೇಲೆ ಕಾಣಿಸಿಕೊಂಡು ತನ್ನ ಅಭಿಮಾನಿಗಳನ್ನು ಸಂತೋಷ ಪಡಿಸುತ್ತಿದ್ದರು.

ಇದೀಗ ಅವರ ಪುತ್ರಿ ಜಾನ್ವಿ ಕಪೂರ್‍ ಅಮ್ಮನನ್ನು ಹೋಲುವ ಸೌಂದರ್ಯ, ನಿಲುವು ಹೊಂದಿದ್ದು ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ ಎನ್ನುವುದು ಈಚೆಗೆ ಬಾಲಿವುಡ್‍ ನಡೆಯುತ್ತಿರುವ ಗುಸುಗುಸು. ಕಪೂರ್ ಕುಟುಂಬ ಅಬುಧಾಬಿಯಲ್ಲಿದ್ದು, ಕುಟುಂಬ ವರ್ಗದವರ ಮದುವೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಯುಎಇಗೆ ತೆರಳಿದ್ದಾರೆ. ಈ ಸಂದರ್ಭ ಶ್ರೀದೇವಿ ಹಾಗೂ ತನ್ನ ಮಕ್ಕಳಾದ ಜಾನ್ವಿ ಹಾಗೂ ಖುಷಿಯೊಂದಿಗಿನ ಭಾವಚಿತ್ರಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು ಪುತ್ರಿ ಜಾನ್ವಿ ಮೇಲೆ ಬಾಲಿವುಡ್ ಕಣ್ಣು ಬಿದ್ದಿದೆ. ಜಾನ್ವಿಯ ಆಗಮನವನ್ನು ಬಾಲಿವುಡ್ ನಿರೀಕ್ಷಿಸುತ್ತಿದೆ.

Leave a Reply

comments

Related Articles

error: