ಕ್ರೀಡೆಮೈಸೂರು

ಅಂಧರ ಕ್ರಿಕೆಟ್ : ಎಂಟು ವಿಕೆಟ್‌ಗಳಿಂದ ಹರಿಯಾಣ ತಂಡ ಮಣಿಸಿದ ಕರ್ನಾಟಕ ತಂಡ

ಮೈಸೂರು,ನ.26:- ಮಾನಸ ಗಂಗೋತ್ರಿ ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಿನ್ನೆಯಿಂದ ಅಂಧರ ಕ್ರಿಕೆಟ್ ಆರಂಭವಾಗಿದೆ.

ಕರ್ನಾಟಕ ತಂಡ ಇಲ್ಲಿ ಇಂಡಸ್‌ ಬ್ಯಾಂಕ್‌ ನಾಗೇಶ್‌ ಟ್ರೋಫಿ ಟ್ವೆಂಟಿ-20 ಅಂಧರ ಕ್ರಿಕೆಟ್‌ ಟೂರ್ನಿಯ ಎರಡನೇ ಅವಧಿಯ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದೆ.

ಎಸ್‌ಜೆಸಿಇ, ಕೆಎಸ್‌ಸಿಎ ಕ್ರೀಡಾಂಗಣದಲ್ಲಿ  ನಿನ್ನೆ  ನಡೆದ ಪಂದ್ಯದಲ್ಲಿ ಕರ್ನಾಟಕ ಎಂಟು ವಿಕೆಟ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಮೊದಲು ಬ್ಯಾಟ್‌ ಮಾಡಿದ ಹರಿಯಾಣ ತಂಡ ದೀಪಕ್‌ ಮಲಿಕ್‌ ಅವರ ಶತಕದ (138, 65 ಎಸೆತ) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 213 ರನ್ ಗಳಿಸಿತು.

ಆತಿಥೇಯ ತಂಡ ಸುನಿಲ್ (98, 52 ಎಸೆತ) ಮತ್ತು ಲೋಕೇಶ್ (75, 58 ಎಸೆತ) ಅವರ ಭರ್ಜರಿ ಆಟದ ನೆರವಿನಿಂದ 19.1 ಓವರ್‌ಗಳಲ್ಲಿ ಗೆಲುವಿನ ಗಡಿ ದಾಟಿತು. ಮತ್ತೊಂದು ಪಂದ್ಯದಲ್ಲಿ ದೆಹಲಿ ತಂಡ ಗೋವಾ ಎದುರು 134 ರನ್‌ಗಳ ಭರ್ಜರಿ ಜಯ ಸಾಧಿಸಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: