ಮೈಸೂರು

ನವೆಂಬರ್ 30ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಉದ್ಯೋಗ ಮೇಳ : ಕುಲಪತಿ ಡಾ.ವಿದ್ಯಾಶಂಕರ್ ಮಾಹಿತಿ

ಮೈಸೂರು,ನ.26:-  ನವೆಂಬರ್ 30ರಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ತಿಳಿಸಿದರು.

ಕರಾಮುವಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಅಂದು ಬೆಳಿಗ್ಗೆ 10.30ಕ್ಕೆ ಉದ್ಯೋಗ ಮೇಲದ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ ನೆರವೇರಿಸಲಿದ್ದು, ಶಾಸಕ ಎಲ್.ನಾಗೇಂದ್ರ, ಸಲಹೆಗಾರ ವೆಂಕಟೇಶ್ ಎಸ್, ರೇಡಿಯೋ ಜಾಕಿ ಅವಿನಾಶ್ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ ಎಂದರು. ಕರ್ನಾಟಕ ಸರ್ಕಾರದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮಾದರಿ ವೃತ್ತಿ ಕೇಂದ್ರ ಮೈಸೂರು ಇವರ ಸಹಯೋಗದೊಂದಿಗೆ ನಡೆಯುವ ಮೇಳದಲ್ಲಿ ರಾಜ್ಯಾದ್ಯಂತ ಇರುವ ವಿವಿಧ ಹೆಸರಾಂತ ಕಂಪನಿಗಳ ನಿಯೋಜಕರನ್ನು ಕರೆಸಿ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಇನ್ಫೋಸಿಸ್, ವಿಪ್ರೋ, ಎಲ್ & ಟಿ, ಗ್ರಾಸ್ ರೂಟ್, ಹಿಂದೂಜಾ ಗ್ಲೋಬಲ್ ಸೊಲ್ಯೂಶನ್, ಮುತ್ತೂಟ್ ಫೈನಾನ್ಸ್, ಥಿಯೋರೆಮ್ಸ್ ಸೇರಿದಂತೆ 70-80 ಕಂಪನಿಗಳ ನಿಯೋಜಕರು ಭಾಗವಹಿಸಲಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಗೂ ವಿಶ್ವವಿದ್ಯಾಲಯದಿಂದ ಪದವಿ(ಎಸ್ ಎಸ್ ಎಲ್ ಸಿ/ಪಿಯುಸಿ/ಪದವಿ/ಐಟಿಐ/ಡಿಪ್ಲೋಮಾ/ಯಾವುದೇ ಪದವಿ ಹಾಗೂ ಸ್ನಾತಕೋತ್ತರ)ಪಡೆದಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. 5ರಿಂದ 6ಸಾವಿರ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: