ಮೈಸೂರು

ನಾವು ಯಾರ ಪರವೂ ಸದ್ಯಕ್ಕೆ ಕೆಲಸ ಮಾಡ್ತಿಲ್ಲ, ಸಿಎಂ ಭೇಟಿ ವಿಚಾರವನ್ನು ಸುಮಲತಾರಿಗೆ ತಿಳಿಸುತ್ತೇನೆ : ಇಂಡವಾಳು ಸಚ್ಚಿದಾನಂದ

ಮೈಸೂರು,ನ.26:- ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಸದೆ ಸುಮಲತಾ ಬೆಂಬಲ ಕೇಳಿದ್ದು, ಸುಮಲತಾ ಆಪ್ತರ ಜೊತೆ ಮಾತುಕತೆ ನಡೆಸಿದರು.

ಮೈಸೂರು ವಿಮಾನ ನಿಲ್ದಾಣದಲ್ಲಿ  ಮಂಡ್ಯ ಸಂಸದೆ ಸುಮಲತ ಆಪ್ತರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ ಇಂಡವಾಳು ಸಚ್ಚಿದಾನಂದರನ್ನು ಭೇಟಿ ಮಾಡಿದರು. ಕೆ.ಆರ್ ಪೇಟೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೋರುವಂತೆ ಮನವಿ ಮಾಡಲು ಭೇಟಿ ಮಾಡಿದರು. ಸಿಎಂ ಭೇಟಿ‌ ನಂತರ ಇಂಡವಾಳು ಸಚ್ಚಿದಾನಂದ ಮಾಧ್ಯಮಗಳೊಂದಿಗೆ ಮಾತನಾಡಿ  ಸಿಎಂ ನಮ್ಮ ಸಂಸದರು ತಮ್ಮ ಬೆಂಬಲಿಗರ ಬೆಂಬಲ ಕೇಳಿದ್ದಾರೆ. ಸಿಎಂ ಕೂಡ ಸುಮಲತಾ ಅವರ ಜೊತೆ ಎರಡು ಮೂರು ಮಾತನಾಡಿದ್ದಾರೆ. ನಾವು ಯಾರ ಪರವೂ ಸದ್ಯಕ್ಕೆ ಕೆಲಸ ಮಾಡ್ತಿಲ್ಲ. ಇನ್ನೂ ಒಂದೆರಡು ದಿನಗಳಲ್ಲಿ ಸಂಸದರು ತಮ್ಮ ನಿರ್ಧಾರ ಪ್ರಕಟಿಸುತ್ತಾರೆ. ನಾನು ಸಿಎಂ ಭೇಟಿ ವಿಚಾರವನ್ನು ಸುಮಲತಾರಿಗೆ ತಿಳಿಸುತ್ತೇನೆ. ಅವರಿಂದ ಸೂಚನೆ ಪಡೆದು ಕೆ.ಆರ್.ಪೇಟೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: