ಮೈಸೂರು

ಪತ್ರಕರ್ತರು, ಪೊಲೀಸರು ಸದಾ ಜನಸ್ನೇಹಿಗಳಾಗಿರಬೇಕು

ಪತ್ರಕರ್ತರು ಹಾಗೂ ಪೊಲೀಸರು ಜನಸ್ನೇಹಿಗಳಾಗಿದ್ದು ಸದಾ ಸಾರ್ವಜನಿಕರ ಸೇವೆಗಾಗಿ ತಮ್ಮ ಜೀವನದ ಬಹುಪಾಲು ಸಮಯವನ್ನು ಮುಡಿಪಾಗಿಟ್ಟಿರುತ್ತಾರೆ. ಖಾಸಗಿ ಬದುಕಿಗಿಂತ ಸಾರ್ವಜನಿಕರೊಂದಿಗೆ ನಿಕಟ ಸಂಬಂಧ ಹೊಂದಿರುವ ಇಂತಹ ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸುವ ಮೂಲಕ ಧನ್ಯವಾದ ಅರ್ಪಿಸಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ನೇಹ ಸಿಂಚನ ಟ್ರಸ್ಟ್ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಆಯೋಜಿಸಿದ್ದ ಪೊಲೀಸ್ ಸೇವಾ ರತ್ನ ಪ್ರಶಸ್ತಿ-2016 ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ನೇಹ ಸಿಂಚನ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಗಲಿರುಳು ಸಾರ್ವಜನಿಕರ ಸೇವೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿರುವ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸುವ ಮೂಲಕ ಅವರಿಗೆ ಕೃತಜ್ಞತೆ ಅರ್ಪಿಸಲಾಗುತ್ತಿದೆ. ಇಂತಹ ಸದವಕಾಶ ಮಾಡಿಕೊಟ್ಟ ಸ್ನೇಹ ಸಿಂಚನ ಟ್ರಸ್ಟ್ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜದ ಆಗುಹೋಗುಗಳಲ್ಲಿ ಪ್ರೆಸ್ ಹಾಗೂ ಪೊಲೀಸ್ ಇಬ್ಬರದೂ ರಚನಾತ್ಮಕ ಪಾತ್ರವಿದೆ. ಸಮಾಜದ ಸ್ವಾಸ್ಥ್ಯ ರಕ್ಷಣೆಗೆ ಈ ಎರಡೂ ಕ್ಷೇತ್ರಗಳಲ್ಲಿ ದುಡಿಯುವವರು ಸದಾ ಕಂಕಣಬದ್ಧರಾಗಿರಬೇಕು ಎಂದರು.

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಮಹದೇವಸ್ವಾಮಿ ಮಾತನಾಡಿ, ದಿನದ 24 ಗಂಟೆಯೂ ಸಮಾಜದ ಕಾವಲುಗಾರಂತೆ ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಾರ್ಥರಹಿತ ಪೊಲೀಸರನ್ನು ಸನ್ಮಾನಿಸಿ ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆಯೇ ಸರಿ. ಸಮಾಜದ ಅವಿಭಾಜ್ಯ ಅಂಗವಾಗಿರುವ ಇಂತಹ ಪೊಲೀಸರನ್ನು ಸನ್ಮಾನಿಸುವ ಮೂಲಕ ಪೊಲೀಸ್ ಇಲಾಖೆಗೆ ಗೌರವ ಸಲ್ಲಿಸುತ್ತಿರುವುದು ಸ್ವಾಗತಾರ್ಹ ಎಂದರು.

ಇದೇ ಸಂದರ್ಭದಲ್ಲಿ ಪೊಲೀಸ್ ಸೇವಾ ರತ್ನ ಪ್ರಶಸ್ತಿಯನ್ನು ಬಿ.ಕೆ. ಹರ್ಷ – ಪೊಲೀಸ್ ಇನ್ಸ್‌ಪೆಕ್ಟರ್, ವೈರ್‌ಲೆಸ್ ವಿಭಾಗ; ಎಂ.ಜಯರತ್ನ – ಪೊಲೀಸ್ ಇನ್ಸ್‌ಪೆಕ್ಟರ್, ಮಹಿಳಾ ಠಾಣೆ; ಜೆ.ಲಕ್ಷ್ಮಿ – ಪೊಲೀಸ್ ಇನ್ಸ್‌ಪೆಕ್ಟರ್, ವೈರ್‌ಲೆಸ್ ವಿಭಾಗ; ಪಿ.ಎಂ. ಸಿದ್ದರಾಜು – ಪೊಲೀಸ್ ಇನ್ಸ್‌ಪೆಕ್ಟರ್, ಲಕ್ಷ್ಮಿಪುರಂ ಠಾಣೆ;  ಹೆಚ್.ಎಸ್. ಪುಟ್ಟೇಗೌಡ – ಹೆಡ್ ಕಾನ್ಸ್‌ಟೇಬಲ್, ಕೆಎಸ್‌ಆರ್‌ಪಿ ಅಶ್ವದಳ; ಬಿ.ಎಸ್. ಪರಶಿವಮೂರ್ತಿ –  ಹೆಚ್.ಸಿ.ಡಿ. ಕಂಪನಿ, ನಗರ ಮೀಸಲು ಪಡೆ; ನಂಜುಂಡಯ್ಯ ಹೆಚ್.ಸಿ – ಮೈಸೂರು ಜಿಲ್ಲಾ ಮೀಸಲು ಪಡೆ; ಶ್ರೀಕಂಠ ಮೂರ್ತಿ ಹೆಚ್.ಸಿ – ಸಂಚಾರ ಪೊಲೀಸ್ ಠಾಣೆ, ಸಿದ್ದಾರ್ಥ ನಗರ; ಮಹಮ್ಮದ್ ಅಬೀದ್ ಹೆಚ್.ಸಿ – 5ನೇ ಪಡೆ, ಕೆಎಸ್‌ಆರ್‌ಪಿ; ಮಂಜುನಾಥ ರಾವ್ ಪಿ.ಸಿ – ಡಿವೈಎಸ್ಪಿ ಕಚೇರಿ, ಸೌತ್ ಮೈಸೂರು;  ವಿ.ಲಾಜವಂತಿ – ಕಾನ್ಸ್‌ಟೇಬಲ್, ಸೌತ್, ಮೈಸೂರು; ಶಿವರಂಜನಿ – ಗಾರ್ಡ್, ಗೃಹ ರಕ್ಷಕ ದಳ ~ ಇವರಿಗೆ ಪ್ರದಾನ ಮಾಡಿ ಗೌರಸಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸ್ನೇಹ ಸಿಂಚನ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

Leave a Reply

comments

Tags

Related Articles

error: