ಮೈಸೂರು

ಅಪೋಲೋದಲ್ಲಿ ಗಣಪತಿ ದೇವಸ್ಥಾನ ಪ್ರತಿಷ್ಠಾಪನೆ

ಮೈಸೂರಿನ ಕುವೆಂಪುನಗರದ ನ್ಯೂಕಾಂತ್ ರಾಜ್ ಅರಸ್ ರಸ್ತೆಯಲ್ಲಿರುವ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಶ್ರೀಪ್ರಸನ್ನ ಮಹಾಗಣಪತಿ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ನಡೆಯಿತು.

ಅಪೋಲೋ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಗಣಪತಿ ದೇವಸ್ಥಾನದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಪೂಜೆ ನೆರವೇರಿಸಿದರು. ಬೆಳಿಗ್ಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಯಾಗಶಾಲಾ ಪೂಜೆ, ಬಿಂಬಶುದ್ಧಿ, ರಕ್ಷಾಬಂಧನ, ಹೋಮ, ಪೂರ್ಣಾಹುತಿ, ಯಾತ್ರಾದಹನ ಸೇರಿದಂತೆ ವಿವಿಧ ಸೇವಾಕಾರ್ಯಗಳು ನಡೆಯಿತು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಬಿಜಿಎಸ್ ಗ್ರೂಪ್ ನ ಪ್ರಕಾಶನಾಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: