ಪ್ರಮುಖ ಸುದ್ದಿ

ಕಾಂಗ್ರೆಸ್ ಆಯೋಜಿಸಿದ ಸಂವಿಧಾನ ದಿನಾಚರಣೆಗೆ ಕಾಂಗ್ರೆಸ್ಸಿಗರೇ ಗೈರು

ರಾಜ್ಯ( ಮಡಿಕೇರಿ) ನ.26 :- ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮಡಿಕೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ಸಿಗರೇ ಗೈರಾದ ಪ್ರಸಂಗ ನಡೆಯಿತು.

ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಚಾಲಕ ತೆನ್ನೀರ ಮೈನಾ ಮಾತನಾಡಿ, ಸಂವಿಧಾನ ದಿನಾಚರಣೆಗೆ ಕಾಂಗ್ರೆಸ್ಸಿಗರೇ ಅತ್ಯಲ್ಪ ಸಂಖ್ಯೆಯಲ್ಲಿ ಬಂದಿರುವುದು ನಿರಾಶೆ ಮೂಡಿಸಿದೆ. ದಿಲ್ಲಿಯಿಂದ ಮುಂಜಾನೆ ಹೊರಟು ಮಡಿಕೇರಿಗೆ ಬ್ರಿಜೇಶ್ ಕಾಳಪ್ಪ ತಲುಪಿದ್ದಾರೆ. ಆದರೆ, ಮಡಿಕೇರಿ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ಸಿಗರೇ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಗ್ರಾಮಮಟ್ಟದಲ್ಲಿಯೂ ಸಂವಿಧಾನದ ಅರಿವಿನ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವುದಾಗಿಯೂ ತೆನ್ನೀರ ಮೈನಾ ಹೇಳಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: