ದೇಶಪ್ರಮುಖ ಸುದ್ದಿ

ಯಶಸ್ವಿಯಾಗಿ ನಭಕ್ಕೆ ಸೇರಿದ ಕಾರ್ಟೋಸ್ಯಾಟ್-3

ಶ್ರೀಹರಿಕೋಟಾ,ನ.27- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಪಿಎಸ್‌ಎಲ್ ವಿ -47 ರಾಕೆಟ್ ನ್ನು ಇಂದು ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.28ಕ್ಕೆ ಪಿಎಸ್‌ಎಲ್ ವಿ ಎಸ್‌ಇ ಸಿ-47 ಅನ್ನು ಉಡಾವಣೆ ಮಾಡಲಾಗಿದೆ.

ರಾಕೆಟ್ ಮೂಲಕ 714 ಕೆಜಿ ತೂಕದ ಆಧುನಿಕ ತಂತ್ರಜ್ಞಾನದ ಭೂವೀಕ್ಷಣೆಯ ಕಾರ್ಟೋಸ್ಯಾಟ್-3 ಮತ್ತು ಅಮೆರಿಕಾಗೆ ಸೇರಿದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ನಭಕ್ಕೆ ಕಳುಹಿಸಿದೆ. ಈ ಪೈಕಿ ಫ್ಲೋಕ್ -4 ಪಿ ಎಂದು ಕರೆಯಲ್ಪಡುವ 12 ಪುಟ್ಟ ಉಪಗ್ರಹಗಳು ಮತ್ತು ಮೆಶ್ಬೆಡ್ ಎಂಬ ಮತ್ತೊಂದು ಚಿಕ್ಕ ಉಪಗ್ರಹವಿದೆ.

Leave a Reply

comments

Related Articles

error: