ಪ್ರಮುಖ ಸುದ್ದಿ

ಯಾರು ಮಾತೃಪಕ್ಷಕ್ಕೆ ಮೋಸ ಮಾಡಿದ್ದಾರೆಯೋ ಅವರಿಗೆ ಜನರು ತಕ್ಕ ಪಾಠಕಲಿಸುತ್ತಾರೆ : ಮಾಜಿ ಸಚಿವ ಡಿ.ಕೆ.ಶಿವಕುಮಾರ್​  ವಾಗ್ದಾಳಿ

ರಾಜ್ಯ(ರಾಮನಗರ)ನ.27:- ಯಾರು ಮಾತೃಭೂಮಿಗೆ ಹಾಗೂ ಮಾತೃಪಕ್ಷಕ್ಕೆ ಮೋಸ ಮಾಡಿದ್ದಾರೆಯೋ ಅವರಿಗೆ ಜನರು ತಕ್ಕ ಪಾಠಕಲಿಸುತ್ತಾರೆ ಎಂದು ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವ ಡಿ.ಕೆ.ಶಿವಕುಮಾರ್​  ವಾಗ್ದಾಳಿ ನಡೆಸಿದರು.

ರಾಮನಗರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್,  ರಾಜ್ಯದ ಮತದಾರರನ್ನು ಅಂಡರ್ ಎಸ್ಟಿಮೇಟ್ ಮಾಡಲು ಆಗುವುದಿಲ್ಲ,  ಅಪರೇಷನ್ ಕಮಲಗೆ ಒಳಗಾದವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲೂ ಜನ ಪ್ರಜ್ಞಾವಂತರಿದ್ದಾರೆ. ಹೀಗಾಗಿ ಮತದಾರರು ಒಳ್ಳೆಯ ತೀರ್ಪು ನೀಡಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಹೊಸಕೋಟೆಗೆ ಹೋಗಿದ್ದೆ, ಇಂದು ಹುಣಸೂರಿಗೆ ತೆರಳುತ್ತಿದ್ದೇನೆ, ಆ ಬಳಿಕ ಕೆ.ಆರ್.ಪೇಟೆಗೂ ಹೋಗಿ ಪ್ರಚಾರ ಮಾಡುತ್ತೇನೆ. ಚಿಕ್ಕಬಳ್ಳಾಪುರ, ಹಾಗೂ ಬೆಂಗಳೂರಿನ ನಾಲ್ಕು ಕ್ಷೇತ್ರದಲ್ಲೂ ಪ್ರಚಾರ ಮಾಡುವೆ. ಡಿಸೆಂಬರ್ 1ರಂದು ರಾಣಿಬೆನ್ನೂರು ಹಿರೆಕೆರೂರಿಗೆ ಹೋಗುತ್ತೇನೆ ಎಂದು ಡಿ,ಕೆ ಶಿವಕುಮಾರ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: