ಪ್ರಮುಖ ಸುದ್ದಿ

ಡಿ.15 ರಂದು ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಮಹಾಸಭೆ

ರಾಜ್ಯ( ಮಡಿಕೇರಿ) ನ.28 :- ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ 2018-19 ನೇ ಸಾಲಿನ ಮಹಾಸಭೆ ಡಿ.15 ರಂದು ಮೂರ್ನಾಡು ಕೊಡವ ಸಮಾಜದಲ್ಲಿ ನಡೆಯಲಿದೆ. ನಗರದ ಹೊಟೇಲ್ ರಾಜ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಪೂರ್ವಭಾವಿ ಸಭೆಯಲ್ಲಿ ಮಹಾಸಭೆಯ ಸಂದರ್ಭ ತೆಗೆದುಕೊಳ್ಳಬೇಕಾದ ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು.
ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಜನಾಂಗದ ಕುಟುಂಬದವರ ಆಟೋಟ ಸ್ಪರ್ಧೆ ನಡೆಸುವುದು ಮತ್ತು 2018-19 ನೇ ಸಾಲಿನಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಜನಾಂಗದ ಮಡಿಕೇರಿ ತಾಲ್ಲೂಕು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲು ನಿರ್ಧರಿಸಲಾಯಿತು. ಅರ್ಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯೊಂದಿಗೆ ಅರ್ಜಿಯನ್ನು ಮಡಿಕೇರಿಯಲ್ಲಿರುವ ಸಂಘದ ಜಿಲ್ಲಾ ಕಾರ್ಯಾಲಯದ ವಿಳಾಸ ಅಧ್ಯಕ್ಷರು/ ಕಾರ್ಯದರ್ಶಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ, ನಂಜುಂಡೇಶ್ವರ ಕೃಪಾ, ದಾಸವಾಳ ರಸ್ತೆ ಮಡಿಕೇರಿ ಇಲ್ಲಿಗೆ ಡಿ.13 ರೊಳಗೆ ಕಳುಹಿಸಿಕೊಡಬೇಕೆಂದು ಮೋಹನ್ ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗೆ ಮೊ.ಸಂ : 9449989743, 8762412358 ನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಅವರನ್ನು ಮುಂದಿನ ಮಹಾಸಭೆಗೆ ಆಹ್ವಾನಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಉಮೇಶ್‍ಕುಮಾರ್.ಪಿ, ಸಂಘದ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಮನುಕುಮಾರ್, ಗೌರವ ಅಧ್ಯಕ್ಷ ಗೋಪಿನಾಥ್, ಸಂಘದ ನಿರ್ದೇಶಕರುಗಳಾದ ದಿನೇಶ್, ಸತೀಶ್, ವಿಜಯಕುಮಾರ್, ಆನಂದ್, ಶಿವಕುಮಾರ್, ಜಲೇಂದ್ರ ಹಾಗೂ ಶೀಲಾ ಅವರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಕುಶಾಲಪ್ಪ ಸ್ವಾಗತಿಸಿದರು, ಖಜಾಂಚಿ ಕೆ.ರಮೇಶ್ ಲೆಕ್ಕಪತ್ರ ಮಂಡಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: