ದೇಶಪ್ರಮುಖ ಸುದ್ದಿ

ಕಳಪೆ ಎಂಜಿನ್‍ನಿಂದ ಕಿಂಗ್‍ಫಿಶರ್ ಏರ್‍ಲೈನ್ಸ್’ಗೆ ನಷ್ಟ : ವಿಜಯ್ ಮಲ್ಯ

ನವದೆಹಲಿ : ವ್ಹಿತ್ನೆಯ್ ಕಂಪನಿಯ ಕಳಪೆ ಗುಣಮಟ್ಟದ ಎಂಜಿನ್‍ಗಳಿಂದಾಗಿ ಕಿಂಗ್‍ಫಿಶರ್ ಏರ್‍’ಲೈನ್ಸ್‍ ನಷ್ಟ ಅನುಭವಿಸಬೇಕಾಯಿತು ಎಂದು ಮದ್ಯದ ದೊರೆ ವಿಜಯ್ ಮಲ್ಯ ಆರೋಪಿಸಿದ್ದಾರೆ. ನಾಗರಿಕ ವಿಮಾನಯಾನದ ಮಹಾ ನಿರ್ದೇಶಕರು ಕಂಪೆನಿ ವಿರುದ್ಧ ತನಿಖೆ ಆರಂಭಿಸಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಅವರು ಟ್ವಿಟರ್ ಮೂಲಕ ಪ್ರತ್ರಿಕ್ರಿಯೆ ನೀಡಿದ್ದಾರೆ.

ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿ ವಿರುದ್ಧ ತನಿಖೆ ಆರಂಭಿಸಿರುವುದು ಸಂತಸ ತಂದಿದೆ. ಕಿಂಗ್’ಫಿಶರ್ ಏರ್’ಲೈನ್ಸ್ ನಷ್ಟ ಅನುಭವಿಸಲು ಅದರ ಕಳಪೆ ಎಂಜಿನ್‍ಗಳೇ ಕಾರಣ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ. ಇಂಡಿಗೊ ಪ್ರಯಾಣಿಕರ ವಿಮಾನದ ಎಂಜಿನ್‍ಗೆ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತನಿಖೆ ಕೈಗೊಂಡ ಹಿನ್ನೆಲೆಯಲ್ಲಿ ಮಲ್ಯ ಈ ಪ್ರತಿಕ್ರಿಯೆ ನೀಡಿದ್ದಾರೆ.

ಕಿಂಗ್’ಫಿಶರ್ ಏರ್’ಲೈನ್ಸ್’ಗೆ ಕಳಪೆ ಗುಣಮಟ್ಟದ ಎಂಜಿನ್ ಪೂರೈಸಿದ ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿಯ ಇಂಟರ್ ನ್ಯಾಷನಲ್ ಏರೊ ಎಂಜಿನ್ಸ್’ಗೆ ಪರಿಹಾರ ನೀಡುವಂತೆ ನಾವು ಕೇಸು ದಾಖಲಿಸಿದ್ದೇವೆ ಎಂದೂ ಕೂಡ ಮಲ್ಯ ಮತ್ತೊಂದು ಟ್ವೀಟ್ ಮಾಡಿದ್ದಾರೆ.  2013 ರಲ್ಲಿ ಇಂಟರ್‍ನ್ಯಾಷನಲ್ ಏರೊ ಎಂಜಿನ್ಸ್ ವಿರುದ್ಧ ಮೊಕದ್ದಮೆ ಹೂಡಿದ್ದ ಮಲ್ಯ, ಕಳಪೆ ಗುಣಮಟ್ಟದ ಎಂಜಿನ್ ಪೂರೈಕೆ ಮಾಡಿದ್ದಕ್ಕಾಗಿ 236 ದಶಲಕ್ಷ ಡಾಲರ್ ಪರಿಹಾರ ಕೋರಿದ್ದರು.

ಪ್ರ್ಯಾಟ್ ಮತ್ತು ವ್ಹಿತ್ನೆಯ್ ಕಂಪೆನಿಯ ಎಂಜಿನ್ ಗಳನ್ನು ಹೊಂದಿದ ತಾಂತ್ರಿಕ ದೋಷಗಳನ್ನು ಎದುರಿಸುತ್ತಿರುವ ಇಂಡಿಗೊ ವಿಮಾನಗಳ ಪರೀಕ್ಷೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಫೆಬ್ರವರಿಯಲ್ಲಿ ಆದೇಶ ನೀಡಿದ್ದಾರೆ.

Leave a Reply

comments

Related Articles

error: