ಮೈಸೂರು

ಇಬ್ಬರು ಪಾದಚಾರಿಗಳಿಗೆ ಗೂಡ್ಸ್‌ ಆಟೋ ಡಿಕ್ಕಿ : ಓರ್ವ ಸ್ಥಳದಲ್ಲೇ ಸಾವು

ಮೈಸೂರು,ನ.28:- ಇಬ್ಬರು ಪಾದಚಾರಿಗಳಿಗೆ ಗೂಡ್ಸ್‌ ಆಟೋ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು  ಮೃತಪಟ್ಟು, ಮತ್ತೊಬ್ಬರು ಗಾಯಗೊಂಡ ಘಟನೆ ಕೃಷ್ಣರಾಜನಗರ ತಾಲೂಕಿನ ಅಡಗೂರು ಗ್ರಾಮದ ಬಳಿ ನಡೆದಿದೆ.

ಮೃತರನ್ನು ಅಡಗೂರು ಗ್ರಾಮದ ಸೋಮಾಚಾರಿ (58) ಎಂದು ಗುರುತಿಸಲಾಗಿದ್ದು,  ಅದೇ ಗ್ರಾಮದ ಸೋಮಶೇಖರಾಚಾರಿ (50) ತಲೆಗೆ ತೀವ್ರ ಪೆಟ್ಟು ಬಿದ್ದು ಮೈಸೂರಿನ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.  ಮಂಗಳವಾರ ರಾತ್ರಿ 7.30ರ ಸುಮಾರಿಗೆ ಸೋಮಾಚಾರಿ ಮತ್ತು ಸೋಮಶೇಖರಾಚಾರಿ ಇಬ್ಬರು ಅಡಗೂರು ಗ್ರಾಮಕ್ಕೆ ಗೇಟ್‌ ಬಳಿಯಿಂದ ನಡೆದುಕೊಂಡು ಮನೆಗೆ ತೆರಳಬೇಕಾದರೆ ಅಡಗೂರು ಗ್ರಾಮದಿಂದ ಬರುವಾಗ ನೇರ ಇಬ್ಬರಿಗೂ ಡಿಕ್ಕಿ ಹೊಡೆದ ಪರಿಣಾಮ ಸೋಮಾಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ತೀವ್ರ  ಗಾಯಗೊಂಡಿದ್ದ ಸೋಮಶೇಖರಾಚಾರಿಯನ್ನು ಕೆ.ಆರ್.ನಗರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಕೂಡಲೇ ದಾರಿಹೋಕರು ಗಾಯಗೊಂಡ ಇಬ್ಬರನ್ನು ಕೂಡಲೇ  ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್‌ಗೆ ಕರೆ ಮಾಡಿ ಪೋಲೀಸರಿಗೆ ಸುದ್ದಿ ಮುಟ್ಟಿಸಿದರು.  ಸ್ಥಳಕ್ಕೆ ಆಗಮಿಸಿದ ಪೋಲೀಸರು ಸ್ಥಳದಲ್ಲೇ ಮೃತಪಟ್ಟ ಸೋಮಾಚಾರಿಯ ಮೃತದೇಹವನ್ನು ಪಟ್ಟಣದ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ ಸೋಮಶೇಖರಾಚಾರಿ ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕಳುಹಿಸಿದರಲ್ಲದೆ ಮೃತನ ಸಹೋದರ ಸಣ್ಣಸ್ವಾಮಾಚಾರ್‌ ನೀಡಿದ ದೂರಿನನ್ವಯ ಘಟನೆಗೆ ಕಾರಣವಾದ ಆಟೋ ಮತ್ತು ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ಧಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: