ಮೈಸೂರು

ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ಪಿರಿಯಾಪಟ್ಟಣ ತಾಲೂಕಿನ ವಿವಿಧ ದೇವಾಲಯಗಳಲ್ಲಿ ದೀಪೋತ್ಸವ

ಮೈಸೂರು,ನ.28:- ಪಿರಿಯಾಪಟ್ಟಣದ  ಅಬ್ಬೂರು ಗ್ರಾಮದ ಐತಿಹಾಸಿಕ ಚಂದ್ರಮೌಳೇಶ್ವರ ದೇಗುಲದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ  ಮಂಗಳವಾರ ಬೆಳಗ್ಗಿನಿಂದಲೇ ವಿಶೇಷ ಪೂಜೆ ಆಯೋಜಿಸಿಸಲಾಗಿತ್ತು.

ಮಧ್ಯಾಹ್ನ ನೂರಾರು ಮಂದಿ ಭಕ್ತರು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ರಾತ್ರಿ ದೀಪ ಬೆಳಗಿ ಸಂಭ್ರಮಿಸಿದರು. ಬೆಟ್ಟದಪುರ ರಸ್ತೆಯಲ್ಲಿರುವ ವದ್ಲಿಬಸವೇಶ್ವರ ದೇಗುಲದಲ್ಲೂ ವಿಜೃಂಭಣೆಯ ಕಾರ್ತಿಕೋತ್ಸವ ನೆರವೇರಿಸಲಾಯಿತು. ನೂರಾರು ಭಕ್ತರು ಕಾಲ್ನಡಿಗೆಯಲ್ಲಿ3 ಕಿ.ಮೀ. ನಡೆದು ಬಂದು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.  ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ದೀಪೋತ್ಸವ ನಡೆಯಿತು.

ಪಿರಿಯಾಪಟ್ಟಣದ ಒಳಕೋಟೆಯಲ್ಲಿರುವ ಸುಪ್ರಸಿದ್ಧ ವೈದ್ಯೇಶ್ವರ ದೇವಾಲಯದಲ್ಲಿ ವಿಜೃಂಭಣೆಯಿಂದ ಲಕ್ಷ ದೀಪೋತ್ಸವ ನಡೆಸಲಾಯಿತು. ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ದೇವರ ಮೆರಣಿಗೆಯ ನಂತರ ಸಾವಿರಾರು ಮಂದಿ ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು. ದೇವಾಲಯದ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದ ಮಹದೇಶ್ವರ, ಶನೇಶ್ವರ, ಕನ್ನಂಬಾಡಿಯಮ್ಮ , ಬಸವನಗುಡಿ, ಗಣಪತಿ ನವಗ್ರಹ ದೇವಾಲಯದಲ್ಲೂ ವಿಶೇಷ ಕಾರ್ತಿಕೋತ್ಸವ ಮತ್ತು ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ  ನಡೆಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: