ಮೈಸೂರು

ವ್ಯಕ್ತಿಯ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಎಗರಿಸಿದ ಭೂಪರು

ಮೈಸೂರಿನ ಚಾಮುಂಡಿಪುರಂನಲ್ಲಿರುವ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬರುತ್ತಿದ್ದ  ವ್ಯಕ್ತಿಯೋರ್ವರ ಗಮನವನ್ನು  ಬೈಕ್ ನಲ್ಲಿ ಬಂದ ವ್ಯಕ್ತಿಗಳೀರ್ವರು ಬೇರೆಡೆಗೆ ಸೆಳೆದು ಕೈಯ್ಯಲ್ಲಿದ್ದ ಹಣದ ಬ್ಯಾಗ್ ನ್ನು ಅಪಹರಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಯಾದವಗಿರಿ ನಿವಾಸಿ ಪ್ರಸನ್ನ ಎಂಬವರೇ ಹಣ ಕಳೆದುಕೊಂಡವರಾಗಿದ್ದಾರೆ. ಇವರು ಮಾರ್ಕೆಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಚಾಮುಂಡಿಪುರಂ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಏಳು ಲಕ್ಷರೂ. ನಗದನ್ನು   ಡ್ರಾ ಮಾಡಿ ಬರುತ್ತಿದ್ದಂತೆ, ಫ್ಯಾಶನ್ ಪ್ರೊ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳೀರ್ವರು ನೋಡಿ ನಿಮ್ಮ ಬ್ಯಾಗ್ ನಿಂದ ಹಣ ಬೀಳುತ್ತಿದೆ ಎಂದು ಅವರ ಗಮನವನ್ನು ಬೇರೆಡೆ ಸೆಳೆದಿದ್ದಾರೆ ಎನ್ನಲಾಗಿದೆ. ಇವರು ಅತ್ತ ನೋಡುತ್ತಿದ್ದಂತೆ ಅವರ ಕೈಲಿದ್ದ ಬ್ಯಾಗ್ ನ್ನು ಎಗರಿಸಿ ಪರಾರಿಯಾಗಿದ್ದಾರೆ.

ಪ್ರಸನ್ನಈ ಕುರಿತು ಕೆ.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಕೆ.ಆರ್.ಇನ್ಸಪೆಕ್ಟರ್ ಪ್ರಕಾಶ್ ಮತ್ತು ಸಿಬ್ಬಂದಿಗಳು ಸುತ್ತಮುತ್ತಲಿರುವ ಸಿಸಿಕ್ಯಾಮರಾ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ.

Leave a Reply

comments

Related Articles

error: