ಮೈಸೂರು

ಜಮೀನಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿ : ಓರ್ವ ರೈತನಿಗೆ ಗಂಭೀರ ಗಾಯ

ಮೈಸೂರು,ನ.28:- ಜಮೀನಿಗೆ ತೆರಳಿದ್ದ ವೇಳೆ   ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತರೋರ್ವರು ಗಾಯಗೊಂಡ ಘಟನೆ ಮೈಸೂರು ಜಿಲ್ಲೆ  ಹುಣಸೂರು ತಾಲೂಕಿನ ಗುರುಪುರ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ರೈತರನ್ನು ರಾಘವೇಂದ್ರ(38 ) ಎಂದು ಹೇಳಲಾಗಿದೆ.  ಇಂದು ಬೆಳಿಗ್ಗೆ ಅವರು ಜಮೀನಿಗೆ ತೆರಳುವಾಗ ಏಕಾಏಕಿ ಆನೆ ದಾಳಿ ಮಾಡಿದೆ. ಇದರಿಂದ ರಾಘವೇಂದ್ರ ಅವರ ಮುಖ ಹಾಗೂ ಸೊಂಟಕ್ಕೆ ಗಂಭೀರ ಗಾಯಗಳಾಗಿದೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಈ ಭಾಗದಲ್ಲಿ ಪದೇ ಪದೇ ಆನೆಗಳ ದಾಳಿಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಮುಂದಾಗಿಲ್ಲ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಹುಣಸೂರು -ಹೆಚ್.ಡಿ.ಕೋಟೆ ರಸ್ತೆ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಗುರುಪುರ, ಗೌಡನಕಟ್ಟೆ, ಹೊಸೂರು ಸೇರಿದಂತೆ ಹಲವು ಗ್ರಾಮದವರು ರಸ್ತೆ ತಡೆ ನಡೆಸಿ, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸುವಂತೆ ಪಟ್ಟು ಹಿಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: