ಮೈಸೂರು

ಪ್ರೀಸ್ಟ್ ರೆ.ಫಾ  ರಾಫೆಲ್ ಮ್ಯಾಥ್ಯೂ ಕೊಲಾಕೊ ನಿಧನ

ಮೈಸೂರು,ನ.28:- ರೆ.ಫಾ  ರಾಫೆಲ್ ಮ್ಯಾಥ್ಯೂ ಕೊಲಾಕೊ ಅವರು ಇಂದು ಬೆಳಿಗ್ಗೆ 7.40  ಶ್ವಾಸಕೋಶದ ಸಮಸ್ಯೆ ಮತ್ತು ಹೃದಯಾಘಾತದಿಂದ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 75ವರ್ಷ ವಯಸ್ಸಾಗಿತ್ತು.  ಅವರು ಕಳೆದ 47 ವರ್ಷಗಳಿಂದ ಮೈಸೂರು ಡಯಾಸಿಸ್ ನ  ಪ್ರೀಸ್ಟ್ ಆಗಿದ್ದರು. ಅವರು ಸಹೋದರ ನಿವೃತ್ತ ಪ್ರಾಧ್ಯಾಪಕ ಪ್ರೊ. ಲೂಯಿಸ್ ಕೊಲಾಕೊ, ಸಹೋದರಿ  ಟೆರೆಶಿಯನ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು ಪ್ರಾಧ್ಯಾಪಕಿ ಪ್ರೊ. ಎಸ್ತರ್ ಅವರನ್ನು ಅಗಲಿದ್ದಾರೆ.

ಮೃತರ ಪಾರ್ಥೀವ ಶರೀರವನ್ನು ಬನ್ನಿಮಂಟಪದ ಎಲ್ಐಸಿ ವಿಭಾಗೀಯ ಕಚೇರಿಯ ಎದುರು ಸೇಂಟ್ ಮೇರಿಸ್ ಮೈನರ್ ಸೆಮಿನರಿಯಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಂದು ಮಧ್ಯಾಹ್ನ 1  ಗಂಟೆಯಿಂದ ಇರಿಸಲಾಗುತ್ತದೆ.   ನವೆಂಬರ್ 29ರ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ  ಸೇಂಟ್ ಜೋಸೆಫ್ ಕ್ಯಾಥೆಡ್ರಲ್‌ಗೆ  ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಅದೇ ದಿನ ಬೆಳಿಗ್ಗೆ 10.30ಕ್ಕೆ   ಗಾಂಧಿನಗರ ಕ್ಯಾಥೊಲಿಕ್ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: