ಮೈಸೂರು

ಡಿ.1 : ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಮೇಳೈಸಲಿದೆ ವಾರಣಾಸಿ ಘರಾನಾ ಕಥಕ್, ಭರತನೃತ್ಯ ಹಾಗೂ ಗೌಂಡಲಿ ನೃತ್ಯ

ಮೈಸೂರು, ನ.28:- ಸಾಂಸ್ಕೃತಿಕ ರಾಜಧಾನಿ ಮೈಸೂರು ಬೆಳೆಯುತ್ತಿರುವಂತೆಯೇ, ಅದರ ಸಾಂಸ್ಕೃತಿಕ ಬೇಡಿಕೆಗಳೂ ಹೆಚ್ಚುತ್ತಿವೆ. ಪ್ರತಿ ತಿಂಗಳೂ ಆರ್ಟಿಕ್ಯುಲೇಟ್ ಫೆಸ್ಟಿವೆಲ್ (ನೃತ್ಯೋತ್ಸವ) ಇದರ ಆಶ್ರಯದಲ್ಲಿ ನಡೆಯುತ್ತಿರುವ ನೃತ್ಯ ಕಾರ್ಯಕ್ರಮವು ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಹಾಗೂ ಹಿರಿಯ ನೃತ್ಯ ಪಟುಗಳಿಗೆ ವೇದಿಕೆಯನ್ನು ಕಲ್ಪಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ನಗರದ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ವೈ.ಟಿ.ತಾತಾಚಾರಿ ಸಭಾಂಗಣದಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರದಂದು ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ನೃತ್ಯ ಸರಣಿಯ 45ನೇ ಸಂಚಿಕೆಯು ಡಿಸೆಂಬರ್ 1ರಂದು ಭಾನುವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದ್ದು ಇದು   ವಿಶೇಷವಾಗಿರಲಿದೆ.

ಲಕ್ನೋ ಹಾಗೂ ಜೈಪುರ್ ಘರಾನಾ ಬಹಳ ಪ್ರಚಲಿತವಾಗಿದ್ದು, ವಾರಣಾಸಿ ಘರಾನಾವನ್ನು   ನಳಿನಿ ಹಾಗೂ  ಕಮಲಿನಿ ಸಹೋದರಿಯರು ಪ್ರೇಕ್ಷಕರಿಗೆ ನೃತ್ಯದ ಮೂಲಕ ಪರಿಚಯಿಸಲಿದ್ದಾರೆ.

ಗುರು   ತುಳಸಿ ರಾಮಚಂದ್ರ  ವಿಜಯನಗರದ ಸಾಮ್ರಾಜ್ಯದ ಆಸ್ಥಾನದಲ್ಲಿ ಮಾಡಲ್ಪಡುತ್ತಿದ್ದ ಹಾಗೂ ಮರೆಯಾದ ನೃತ್ಯ ಶೈಲಿ ‘ಗೌಂಡಲಿ’ ಪುನರ್ಜೀವನದ ಮೂಲಕ   ತಮ್ಮ ಮೂವರು ಶಿಷ್ಯರ ಮೂಲಕ ಈ ವಿಶೇಷ ನೃತ್ಯವನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ.

ಗುರು ಡಾ.ಪದ್ಮ ಸುಬ್ರಹ್ಮಣ್ಯಂರ  ಉದಯೋನ್ಮುಖ ಶಿಷ್ಯೆಯರಾದ   ಸಮುದ್ಯತಾ ಹಾಗೂ   ಸಮನ್ವಿತಾ ಜೋಡಿ ಭರತನೃತ್ಯದ ಕೆಲವು ಕರ್ಣಗಳನ್ನು  ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಮೈಸೂರು ಬಿ.ನಾಗರಾಜ್, ಮೊಬೈಲ್ ಸಂಖ್ಯೆ 9341288391 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: