ಮೈಸೂರು

ಡಿ.1 : ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 9ನೇ ಪುಣ್ಯ ಸ್ಮರಣೆಯ ಅಂಗವಾಗಿ ವಿವಿಧ  ಕಾರ್ಯಕ್ರಮ

ಮೈಸೂರು,ನ.28:- ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ವತಿಯಿಂದ ಪದ್ಮಭೂಷಣ ಲಿಂ.ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ 9ನೇ ಪುಣ್ಯ ಸ್ಮರಣೆಯ ಅಂಗವಾಗಿ ವಿವಿಧ  ಕಾರ್ಯಕ್ರಮಗಳನ್ನು ಡಿ.1 ರಂದು ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಮ.ವಿ.ರಾಮಪ್ರಸಾದ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ರಿಂದ `ಭೈರವದಿಂದ ಭೈರವಿ’ ಹಾಗೂ `ಪುಟ್ಟಶ್ರೀ ಸಮ್ಮಾನ’-2019, ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳವರ ವಚನಗಳ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ, ಸಂಗೀತೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದು, ಚಿತ್ರಕಲಾ ಪ್ರದರ್ಶನವನ್ನು ಕೆ.ಎಸ್.ಜಿ.ಹೆಚ್. ಸಂಗೀತ ವಿವಿ ಪ್ರಭಾರ ಕುಲಪತಿ ಪ್ರೊ.ನಾಗೇಶ ವಿ.ಬೆಟ್ಟಕೋಟೆ ಉದ್ಘಾಟಿಸಲಿದ್ದಾರೆ.  ರೋಹಿತ್ ಕಳಲೆಗೆ ಪುಟ್ಟಶ್ರೀ ಸಮ್ಮಾನ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಪ್ರದಾನ ಮಾಡಲಿದ್ದಾರೆ. ವಚನ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ಚಿಲಿಪಿಲಿ ಸಮೂಹ ಸಂಸ್ಥೆ ಅಧ್ಯಕ್ಷ ಶಂಕರ ಹಲಗತ್ತಿ ವಿತರಣೆ ಮಾಡಲಿದ್ದಾರೆ. ಬಿದನೂರಿನ ಹಿರಿಯ ಸಂಗೀತಗಾರ ಸೂರ್ಯಕಾಂತ ಹೊಳೆ ಅವರಾದಿ, ಧಾರವಾಡದ ಹಿರಿಯ ರಂಗಭೂಮಿ ಕಲಾವಿದ ವೀರಣ್ಣ ಪತ್ತಾರ ಮತ್ತು ಗದಗದ ವಯೋಲಿನ್ ಶಿಕ್ಷಕ ಸುರೇಶ ಎಸ್. ಮಂಗಳೂರು ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ನಂತರ ಸಮೂಹ ತಬಲ ವಾದನ, ಸಮೂಹ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷ ಭೀಮಾಶಂಕರ ಬಿದನೂರು, ನೇತ್ರ, ಪುನೀತ್, ಜಗದೀಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: