ಮೈಸೂರು

ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಪೊಲೀಸರ ದಾಳಿ : ಐವರು ಮಹಿಳೆಯರ ರಕ್ಷಣೆ ; ಮೂವರ ಬಂಧನ

ಮೈಸೂರು,ನ.29:- ಮೈಸೂರು ನಗರ ಸಿ.ಸಿ.ಬಿ. ಪೊಲೀಸರು ಮಾಹಿತಿ ಮೇರೆಗೆ 27/11/19 ರಂದು ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಷ ರಸ್ತೆಯಲ್ಲಿರುವ ಗೋವರ್ದನ್ ಹೋಟೆಲ್‍ನ 2ನೇ ಮಹಡಿಯಲ್ಲಿರುವ “ಎವರ್‍ಗ್ರೀನ್ ಬ್ಯೂಟಿ ಸಲೂನ್ & ಸ್ಪಾ” ಮೇಲೆ ದಾಳಿ ಮಾಡಿ, ಸ್ಪಾ ನಡೆಸುವ ನೆಪದಲ್ಲಿ ಮಹಿಳೆಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.
ಹರೀಶ್ ಬಿನ್ ಕೃಷ್ಣಪ್ಪ, (35), ಪಿರಿಯಾಪಟ್ಟಣ, ಮೈಸೂರು ಜಿಲೆ, ಪಿಂಪ್ ಪವಿತ್ @ ಪವನ್ ಬಿನ್ ವಿಜಯಕುಮಾರ್, (39), ಕೂಪಾಟಿ ಗ್ರಾಮ, ಭಾಗಂಡಲ, ಮಡಿಕೇರಿ, ಮೈಸೂರು ಎಂಬುವವರನ್ನು ದಸ್ತಗಿರಿ ಮಾಡಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅನಿಲ್‍ಕುಮಾರ್ ಬಿನ್ ಕಾಳೇಗೌಡ (27), ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು, ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಕಲ್ಕತ್ತಾ ಮೂಲದ 02, ಮಂಡ್ಯ ಮೂಲದ 02 ಹಾಗೂ ಮೈಸೂರಿನ 01 ಮಹಿಳೆಯರನ್ನು ರಕ್ಷಣೆ ಮಾಡಿ, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 4,100ರೂ. ನಗದು ಹಣ, 1- ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿ ಕಾರ್ಯವನ್ನು ಸಿ.ಸಿ.ಬಿ. ಯ ಪೊಲೀಸ್ ಇನ್ಸ ಪೆಕ್ಟರ್ ಮಲ್ಲೇಶ್, ಲಷ್ಕರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮುನಿಯಪ್ಪ, ಪಿ.ಎಸ್.ಐ. ಪೂಜಾ, ಎ.ಎಸ್.ಐ. ರಾಜು, ಮಹದೇವಸ್ವಾಮಿ, ಆದಂ, ಲಿಂಗರಾಜು, ಶ್ರೀನಿವಾಸ್.ಕೆ.ಜಿ, ಮಂಜುಳ, ಜ್ಯೋತಿ, ಗೀತಾ ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: