ಪ್ರಮುಖ ಸುದ್ದಿಮೈಸೂರು

ಉಪ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಖಾತೆಯನ್ನೇ ತೆರೆಯುವುದಿಲ್ಲ   : ಭವಿಷ್ಯ ನುಡಿದ ಡಿಸಿಎಂ ಗೋವಿಂದ ಕಾರಜೋಳ

ಮೈಸೂರು,ನ.29:-  ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವನ್ನು ಜನತೆ ತಿರಸ್ಕರಿಸಿದ್ದರು. ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿದ ಜೆಡಿಎಸ್‌ ಮತ್ತು ಕಾಂಗ್ರಸ್‌ನ ದುರಾಡಳಿತಕ್ಕೆ ಬೇಸತ್ತು 17 ಮಂದಿ ಶಾಸಕರು ಸರಕಾರದಿಂದ ಹೊರಬಂದರು. ಇವರಾರು ಹಣ, ಅಧಿಕಾರಕ್ಕಾಗಿ ಹೊರಬರಲಿಲ್ಲ. ಬಿಜೆಪಿ ಸರಕಾರ ರಚಿಸಲು ಕಾರಣರಾದ ಇವರೆಲ್ಲರನ್ನು ಗೆಲ್ಲಿಸುವ ಋುಣ ನಮ್ಮೆಲ್ಲರ ಮೇಲಿದೆ. ಎಚ್‌.ವಿಶ್ವನಾಥ್‌ರನ್ನು ಗೆಲ್ಲಿಸಿ  ಎಂದು ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಮನವಿ ಮಾಡಿದರು.

ಹುಣಸೂರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಾದಿಗ ಸಮುದಾಯದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನೀವು ನೀಡುವ ಒಂದೊಂದು ಮತವೂ ನಿಮ್ಮ ಮನೆ ಮಗ ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅನುಕೂಲವಾಗಲಿದೆ. ಉಪ ಚುನಾವಣೆಯಲ್ಲಿ 12 ಸೀಟುಗಳನ್ನು ನಾವು ಪಡೆಯುತ್ತೇವೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಇದೇ ಮಾತನ್ನು ಲೋಕಸಭಾ ಚುನಾವಣೆಯಲ್ಲೂ ಹೇಳಿದ್ದರು. ಹಾಗೇನಾದರೂ ಆದರೆ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಾವೆಲ್ಲರೂ ಸೇರಿ ಅವರಿಗೆ ಮೆರವಣಿಗೆ ಮಾಡುತ್ತೇವೆ  ಎಂದು ಸವಾಲು ಹಾಕಿದ ಕಾರಜೋಳ ಉಪ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಖಾತೆಯನ್ನೇ ತೆರೆಯುವುದಿಲ್ಲ  ಎಂದು ಭವಿಷ್ಯ ನುಡಿದರು.

ಸಂಸದ ನಾರಾಯಣಸ್ವಾಮಿ, ಶಾಸಕರಾದ ನಿರಂಜನ್‌, ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಅಶೋಕ್‌, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: