ಮೈಸೂರು

ಸಾವಯವ ಕೃಷಿಯನ್ನು ಅನುಸರಿಸಿ ಫಲವತ್ತತೆ ಕಾಪಾಡಿಕೊಳ್ಳಿ : ಪ್ರೊ. ಎಸ್.ಶಂಕರ ಭಟ್

ಸಾವಯವ ಕೃಷಿಯನ್ನು ಅನುಸರಿಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಸಸ್ಯಾರೋಗ್ಯ ಕೇಂದ್ರ ಸ್ಥಾಪಕ ಪ್ರೊ. ಎಸ್.ಶಂಕರ ಭಟ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಸಸ್ಯಾರೋಗ್ಯ ಕೇಂದ್ರ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಲಿನ್ನೆಯಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಕುರಿತಾದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಸಾಯನಿಕ ಬೇಸಾಯ ಮಣ್ಣಿನ ಫಲವತ್ತತೆಗೆ ಮಾರಕವಾಗಿದೆ. ರಾಸಾಯನಿಕ ಕೀಟನಾಶಗಳಿಂದ ವಾತಾವರಣದಲ್ಲಿರುವ ಅದೆಷ್ಟೋ ಸೂಕ್ಷ್ಮ ಜೀವಿಗಳು ಸಾಯುತ್ತಿವೆ. ಉತ್ತಮ ರೀತಿಯಲ್ಲಿ ಪರಾಗ ಸ್ಪರ್ಶ ಕ್ರಿಯೆ ನಡೆಯುತ್ತಿಲ್ಲ. ರೈತರು ರಾಸಾಯನಿಕ ಕೀಟನಾಶಕ, ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಬಳಸುವ ಮೂಲಕ ಸುಂದರ ಪರಿಸರ ಹಾಗೂ ಮಣ್ಣನ್ನು ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಸಾಯನಿಕ ಬೇಸಾಯ ಮಾಡುವುದರಿಂದ ಎದುರಾಗುವ ಸಮಸ್ಯೆಗಳ ಬಗ್ಗೆ  ಅರಿಯದ ರೈತರು ಮೋಸಹೋಗುತ್ತಿದ್ದಾರೆ. ಕ್ರಿಮಿನಾಶಕಗಳ ಬಳಕೆ ಕಡಿಮೆ ಮಾಡಿ ಮಣ್ಣಿನ ಜೈವಿಕ ಚಟುವಟಿಕೆ ವೃದ್ಧಿಸಬೇಕಾಗಿದೆ. ಇದರಿಂದ ಜೀವ ವೈವಿಧ್ಯತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಪ್ರಾಧ್ಯಾಪಕ ಪ್ರೊ.ಜಿ.ಆರ್.ಜನಾರ್ಧನ ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಅಧ್ಯಕ್ಷೆ ಪ್ರೊ.ಶೋಭ ಜಗನ್ನಾಥ್ ಉಪಸ್ಥಿತರಿದ್ದರು.

Leave a Reply

comments

Related Articles

error: