ಪ್ರಮುಖ ಸುದ್ದಿ

ಸೋಮಣ್ಣ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಬಿದ್ದಿದ್ದರು : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ರಾಜ್ಯ(ಬೆಂಗಳೂರು)ನ.29:- ಹೆಚ್.ಡಿ.ಕೆ ಲಾಟರಿ ಹೊಡೆದು ಎರಡು ಬಾರಿ ಸಿಎಂ ಆಗಿದ್ರು ಎಂದು ವ್ಯಂಗ್ಯವಾಡಿದ್ದ ಸಚಿವ ವಿ.ಸೋಮಣ್ಣ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸೋಮಣ್ಣ ಜನತಾ ಬಜಾರ್ ನಲ್ಲಿ ಬಟ್ಟೆ ಕದ್ದು ಸಿಕ್ಕಿಬಿದ್ದಿದ್ದರು. ಸೋಮಣ್ಣ ಹೆಚ್.ಡಿ ದೇವೇಗೌಡರ ಮುಂದೆ ಬಚ್ಚಾ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಮಾಧ್ಯಮದ ಜತೆ ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸೋಮಣ್ಣ ಯಾರು ಯಾರ ಕಾಲಿಗೆ ಬಿದ್ದಿದ್ದಾರೆ ಎಂಬುದು ಗೊತ್ತು.  ಹೆಚ್.ಡಿ ದೇವೇಗೌಡರು ಇಳಿ ವಯಸ್ಸಿನಲ್ಲೂ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಿಮ್ಮಂತೆ ಪಕ್ಷದಲ್ಲಿ ಬೆಳೆದು ದ್ರೋಹ ಮಾಡಿಲ್ಲ.  ಸೋಮಣ್ಣನವರಿಗೆ ದೇವೇಗೌಡರ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹರಿಹಾಯ್ದರು.

ಡಿವಿ ಸದಾನಂದಗೌಡರನ್ನು ಸಾವಿನ ಮನೆಗೆ ಕರೆದೊಯ್ಯಬೇಡಿ

ಇದೇ ವೇಳೆ ಕೇಂದ್ರ ಸಚಿವ ಸದಾನಂದ ಗೌಡರ ವಿರುದ್ಧವೂ  ಗುಡುಗಿದ ಹೆಚ್.ಡಿ ಕುಮಾರಸ್ವಾಮಿ, ಸದಾನಂದಗೌಡರು ಸಾವಿನ ಮನೆಗೆ ಹೋಗಿ ನಗ್ತಾರೆ. ಹೀಗಾಗಿ ಅವರನ್ನು ಸತ್ತ ಮನೆಗೆ ಕರೆದುಕೊಂಡು ಹೋಗಬಾರದು. ಸಾವಿನ ಮನೆಗೆ ಕರೆದೊಯ್ದರೆ ಸತ್ತವರ ಮನೆಯಲ್ಲೂ ನಗುತ್ತಾರೆ ಎಂದು ಲೇವಡಿ ಮಾಡಿದರು.

ಹೆಚ್.ಡಿಡಿ ನಾನು ಇಲ್ಲದಿದ್ರೆ ಗೋಪಾಲಯ್ಯ ಯಾವೊತ್ತೋ ಎನ್ ಕೌಂಟರ್ ಆಗ್ತಿದ್ರು

ಹಾಗೆಯೇ ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧವೂ ಕಿಡಿಕಾರಿದ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ.ದೇವೇಗೌಡ, ನಾನು ಇಲ್ಲದಿದ್ರೆ ಗೋಪಾಲಯ್ಯ ಯಾವತ್ತೋ ಎನ್ ಕೌಂಟರ್ ಆಗ್ತಿದ್ರು. ಪೊಲೀಸರಿಂದ ಅಲ್ಲ ರೌಡಿಗಳಿಂದ ಎನ್ ಕೌಂಟರ್ ಆಗ್ತಿದ್ರು. ಗೋಪಾಲಯ್ಯ ಬದಲಾಗ್ತಾರೆ ಅಂತ 2013ರಲ್ಲಿ ಒಂದು ಅವಕಾಶ ಕೊಟ್ಟಿದ್ದೆವು ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: